ಬೆಂಗಳೂರು: ರಾಜ್ಯದಲ್ಲಿ ಕಳೆದ ತಿಂಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆಯ ವಿವಾದ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪ್ರಾರಂಭದಿಂದಲೂ ಕೂಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಿಂದ ತುಂಬಾ ಅಡ್ಡಿಗಳು ಕೇಳಿ ಬರುತ್ತಿತ್ತು. ಇದೀಗ ವಿವಾದ ತಣ್ಣಾಗಾಯ್ತು ಅನ್ನುವಷ್ಟರಲ್ಲಿ ಶಿಕ್ಷಣ ಇಲಾಖೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
BIGG NEWS: ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ; ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ
ಅಷ್ಟೇ ಅಲ್ಲದೆ ಈ ಬಗ್ಗೆ ಹೋರಾಟಕ್ಕೂ ಕಾರಣವಾಗಿತ್ತು. ಆದ್ರೆ ಎಷ್ಟೇ ವಿರೋಧಿಸಿದ್ರೂ ಕೂಡ ಶಿಕ್ಷಣ ಸಚಿವರು ಕ್ಯಾರೇ ಎನ್ನದೆಪರಿಷ್ಕರಣೆಯ ಪಠ್ಯವನ್ನ ಮಕ್ಕಳಿಗೆ ನೀಡಿದ್ದರು. ಈ ವೇಳೆ ಕೆಲ ಲೇಖಕರು ವಿರೋಧ ಕೂಡಾ ವ್ಯಕ್ತಪಡಿಸಿದರು. ಇದೀಗ ಎಲ್ಲ ತಣ್ಣಗಾಯ್ತು ಅನ್ನುವಷ್ಟರಲ್ಲಿಯೇ ಶಿಕ್ಷಣ ಇಲಾಖೆ ಈಗ ವಿರೋಧ ಮಾಡಿದ ಲೇಖಕರ ಭಗತ್ ಸಿಂಗ್ ಕುರಿತಾದ ಪಠ್ಯ ಕೈಬಿಟ್ಟಿದ್ದು , ಸದ್ಯ ಭಗತ್ ಸಿಂಗ್ ಪಾಠವನ್ನೂ ಪಠ್ಯ ಭೋದನೆಯಿಂದ ಕೈಬಿಟ್ಟಿರುವುದು ವಿರೊಧಕ್ಕೆ ಕಾರಣವಾಗುತ್ತಿದೆ.
BIGG NEWS: ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ; ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ
ಶಿಕ್ಷಣ ಇಲಾಖೆ ಭಗತ್ ಸಿಂಗ್ ಪಾಠವನ್ನ ಭೋದನೆಯಿಂದ ಕೈಬಿಟ್ಟಿರೊದಕ್ಕೆ ಲೇಖಕರು ಹಾಗೂ ವಿದ್ಯಾರ್ಥಿಗಳ ಸಂಘಟನೆಗಳು ವಿರೋಧಿಸುತ್ತಿದ್ದಾರೆ.
ಪಠ್ಯ ಪರಿಷ್ಕರಣೆ ವೇಳೆಯೇ ಭಗತ್ ಸಿಂಗ್ ಪಾಠ ಕೈಬಿಟ್ಟು ವಿರೋಧಕ್ಕೆ ಶಿಕ್ಷಣ ಇಲಾಖೆ ಗುರಿಯಾಗಿತ್ತು. ವ್ಯಾಪಕ ವಿರೋಧದ ಬಳಿಕ ಪಾಠ ಕೈಬಿಟ್ಟಿಲ್ಲ ಅಂತಾ ನಾಟಕವಾಡಿತ್ತು. ಆದ್ರೆ ಈಗ ಲೇಖಕರು ವಿರೋಧ ಮಾಡಿದ್ದಾರೆ ಅನ್ನೋ ಕಾರಣ ಮುಂದಿಟ್ಟು ಎಸ್ಎಸ್ಎಲ್ ಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣವಾಗೀರೊ ಭಗತ್ ಸಿಂಗ್ ಪಾಠವನ್ನ ಭೋದನೆಯಿಂದ ಕೈಬಿಟ್ಟಿದೆ. ಮಕ್ಕಳಿಗೆ ಭಗತ್ ಸಿಂಗ್ ಪಾಠ ಮಾಡದಂತೆ ಸುತ್ತೋಲೆ ಹೊರಡಿಸಿದೆ.