ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಮಾರಿಹಾಳ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು ಮಾಡಲಾಗಿದೆ.
BIG BREAKING NEWS: ಬೆಂಗಳೂರಿಗೂ ಕಾಲಿಟ್ಟ ಮಕ್ಕಳ ಕಳ್ಳರ ವದಂತಿ..!; ಸುಳ್ಳು ಸುದ್ದಿಗೆ ಬಿತ್ತು ಅಮಯಾಕನ ಹೆಣ!
ಅವರನ್ನು ಅಮಾನತು ಮಾಡಿ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊಡಿಸಿದ್ದಾರೆ.ಮಾರಿಹಾಳ ಠಾಣೆ ಹೆಡ್ಕಾನ್ಸ್ಟೇಬಲ್ ಬಿ.ಎಸ್.ಬಳಗಣ್ಣವರ್. ಪೊಲೀಸ್ ಸಿಬ್ಬಂದಿ ಆರ್.ಎಸ್.ತಳೇವಾಡೆ ಅಮಾನತ್ತಾಗಿದ್ದಾರೆ. ಅ.6ರಂದು ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ರಾತ್ರಿ ಎರಡು ಗ್ಯಾಂಗ್ಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ಮಹೇಶ್, ಪ್ರಕಾಶ್ ಎಂಬುವರ ಹತ್ಯೆಯಾಗಿತ್ತು. ಗ್ಯಾಂಗ್ವಾರ್ ಬಗ್ಗೆ ಮಾಹಿತಿ ಇದ್ದರು ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ನಿರ್ಲಕ್ಷ್ಯ ತೋರಿದ ಆರೋಪ ಹಿನ್ನೆಲೆ ಅಮಾನತು ಮಾಡಲಾಗಿದೆ.