ಬೆಂಗಳೂರು: ಜನತಾದಳ ಪಕ್ಷದಿಂದ ಮತ್ತೊಂದು ಬೃಹತ್ ಸಮಾವೇಶ ಇಂದು ಆಯೋಜಿಸಲಾಗಿದೆ. ನಗರದ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಜನತಾ ಮಿತ್ರ ಸಮಾವೇಶ ನಡೆಯಲಿದೆ.
BIGG NEWS: ಭೂ ಅಕ್ರಮ; ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ; ವಿ ಎಸ್ ಉಗ್ರಪ್ಪ
ಬೆಂಗಳೂರು ನಗರದ ಜನತೆಯ ಸಮಸ್ಯೆ ಹಾಗೂ ಪರಿಹಾರಗಳನ್ನು ಗುರಿಯಾಗಿಟ್ಟುಕೊಂಡು ಮಾಡಿರುವ ಕಾರ್ಯಕ್ರಮವಿದು. ಪ್ರತಿ ವಾರ್ಡ್ ನಲ್ಲೂ ಜನತಾ ಮಿತ್ರ ಹೆಸರಿನ ವಾಹನ ಸಂಚರಿಸಿದ್ದು, ಜನರ ಸಮಸ್ಯೆಗಳನ್ನು ಜೆಡಿಎಸ್ ನಾಯಕರು ಆಲಿಸಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಬೆಂಗಳೂರಿಗೆ ಮಾಡಬಹುದಾದ ಕಾರ್ಯಕ್ರಮಗಳ ಪರಿಚಯ ಮಾಡಿಕೊಡುತ್ತಿದ್ದಾರೆ.
BIGG NEWS: ಭೂ ಅಕ್ರಮ; ಶ್ರೀರಾಮುಲು ಮೇಲೆ ಆರೋಪ ಪಟ್ಟಿ ದಾಖಲಾಗಿದೆ; ವಿ ಎಸ್ ಉಗ್ರಪ್ಪ
ಈ ಕಾರ್ಯಕ್ರಮದಲ್ಲಿ ಹೆಚ್.ಡಿ ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ, ಟಿ.ಎ ಶರವಣ, ಬೋಜೆಗೌಡ, ಆರ್ ಪ್ರಕಾಶ್, ಆರ್ ಮಂಜುನಾಥ್ ಸೇರಿದಂತೆ ಕೆಲವರು ಶಾಸಕರು ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ.