ನವದೆಹಲಿ: ಈ ವರ್ಷ 400 ಕ್ಕೂ ಹೆಚ್ಚು ದುರುದ್ದೇಶಪೂರಿತ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ಗಳನ್ನು ಗುರುತಿಸಿರುವುದಾಗಿ ಕಂಪನಿ ಶುಕ್ರವಾರ ಘೋಷಿಸಿದೆ, ಇದು ಇಂಟರ್ನೆಟ್ ಬಳಕೆದಾರರನ್ನು ಅವರ ಲಾಗಿನ್ ಮಾಹಿತಿಯನ್ನು ಕದಿಯುವ ಸಲುವಾಗಿ ಗುರಿಯಾಗಿಸಿಕೊಂಡಿದೆಯಂತೆ. ಓ ಅಪ್ಲಿಕೇಶನ್ಗಳನ್ನು ತೆಗೆದುಹಾಕಲು ಅನುಕೂಲವಾಗುವಂತೆ ಈ ವಿಷಯದ ಬಗ್ಗೆ ಆಪಲ್ ಮತ್ತು ಗೂಗಲ್ ಎರಡಕ್ಕೂ ಮಾಹಿತಿ ನೀಡಿದೆ ಎಂದು ಮೆಟಾ ಹೇಳಿದೆ.
ಈ ಆ್ಯಪ್ಗಳು ಫೋಟೋ ಎಡಿಟರ್ಗಳು, ಮೊಬೈಲ್ ಗೇಮ್ಗಳು ಅಥವಾ ಹೆಲ್ತ್ ಟ್ರ್ಯಾಕರ್ಗಳಂತೆ ವೇಷ ಧರಿಸಿ ಕೆಲಸ ಮಾಡುತ್ತವೆ ಎಂದು ಫೇಸ್ಬುಕ್ ಹೇಳಿದೆ. 400 ಸಮಸ್ಯಾತ್ಮಕ ಅಪ್ಲಿಕೇಶನ್ಗಳಲ್ಲಿ 45 ತನ್ನ ಆಪ್ ಸ್ಟೋರ್ನಲ್ಲಿವೆ ಮತ್ತು ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಆಪಲ್ ಹೇಳಿದೆ.
‘