ಬೆಂಗಳೂರು: ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ಮಹತ್ವದ ಮಾಹಿತಿ ನೀಡಿದ ಬೆನ್ನಲೇ, ಒಳಮೀಸಲಾತಿಗೂ ಕೂಡ ಬೇಡಿಕೆ ಹೆಚ್ಚಾಗುತ್ತ ಹೋಗುತ್ತಿದೆ. ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಸರ್ಕಾರ ಒಪ್ಪಿಕೊಳ್ಳಬೇಕು ಅಂತ ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಒಳಮೀಸಲಾತಿಗಾಗಿ ಇಡೀ ಕರ್ನಾಟಕದಾದ್ಯಂತ ಹೋರಾಟವನ್ನು ಕಳೆದ ಮೂರು ದಶಕದಿಂದ ಹೋರಾಟಗಳು ನಡೆಯುತ್ತಲೇ ಬಂದಿದ್ದು, ಅನೇಕ ರಾಜಕೀಯ ನಾಯಕರುಗಳು ಒಳಮೀಸಲಾತಿ ಜಾರಿ ಮಾಡುತ್ತೇವೆ ಅಂತ ಸುಳ್ಳು ಹೇಳುತ್ತಲೇ ಬರುತ್ತಲಿದ್ದು, ಇದು ಪ.ಜಾತಿ ಎಡಗೈ ಮತ್ತು ಬಲಗೈ ಸಮುದಾಯದವರ ಸಿಟ್ಟಿಗೆ ಕಾರಣವಾಗಿದೆ.
ಇದಲ್ಲದೇ ಸಿದ್ದರಾಮಯ್ಯ ಅವರು ಕೂಡ ಒಳಮೀಸಲಾತಿ ಮಾಡದೇ ಕೂಡ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ ಅಂತ ನವದೆಹಲಿಯಲ್ಲಿ ಹೇಳಿಕೊಂಡಿದ್ದರು, ಇದಲ್ಲದೇ 101 ಎಸ್ಸಿ ಜಾತಿಗಳ ಪಟ್ಟಿ ಅತಿ ಹೆಚ್ಚು ಜನಸಂಖ್ಯೆಯಲ್ಲಿರುವ ಮಾದಿಗರನ್ನು ಓಲೈಕೆ ಮಾಡಲು ಬಿಜೆಪಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಆರ್ಎಸ್ಎಸ್ ನಾಯಕರುಗಳು ಕೂಡ ಒಳಮೀಸಲಾತಿ ಬಗ್ಗೆ ಶೀಘ್ರವಾಗಿ ತೀರ್ಮಾನ ಕೈಗೊಳ್ಳುವಂತೆ ಬಿಜೆಪಿ ನಾಯಕರುಗಳಿಗೆ ತಿಳಿಸಿದ್ದಾರಂತೆ.