ಮಂಡ್ಯ : ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ಸರ್ವನಾಶ ಮಾಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.
ಬಿಜೆಪಿಯವರು ಎರಡು ಇಂಡಿಯಾ ನಿರ್ಮಾಣ ಮಾಡುತ್ತಿದ್ದಾರೆ, ಒಂದು ಶ್ರೀಮಂತರ ಇಂಡಿಯಾ ಮತ್ತೊಂದು ಇನ್ನೊಂದು ಕೋಟ್ಯಂತರ ಬಡವರ ಬಡ ಇಂಡಿಯಾ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.
ನಾಗಮಂಗಲ ತಾಲೂಕಿನ ಬೆಳ್ಳೂರು ನಿಲ್ದಾಣ ಬೆಳ್ಳೂರು ಬಸ್ ನಿಲ್ದಾಣದಲ್ಲಿ ಭಾರತ್ ಜೋಡೋ ಸಮಾವೇಶದಲ್ಲಿ (Bharat Jodo Yatra) ಮಾತನಾಡಿದ ರಾಹುಲ್ ಗಾಂಧಿ ಬಿಜೆಪಿಯವರು ಎರಡು ಇಂಡಿಯಾ ನಿರ್ಮಾಣ ಮಾಡುತ್ತಿದ್ದಾರೆ, ನಾವು ಎರಡು ಇಂಡಿಯಾ ಒಪ್ಪಿಕೊಳ್ಳುವುದಿಲ್ಲ, ಜನರ ಜೇಬಿನಿಂದ ಹಣ ವಿಶ್ವದ 2ನೇ ಶ್ರೀಮಂತ ವ್ಯಕ್ತಿಗೆ ಹೋಗುತ್ತಿದೆ ಎಂದು ವಾಗ್ಧಾಳಿ ನಡೆಸಿದರು.
ನಿಮ್ಮ ಮಕ್ಕಳನ್ನು ನೀವು ಒಳ್ಳೇ ಶಾಲಾ, ಕಾಲೇಜಿಗೆ ಕಳಿಸಲೂ ಕಷ್ಟ ಪಡಬೇಕು. ಪದವಿ ಸರ್ಟಿಫಿಕೆಟ್ ಯಾವುದೇ ಕೆಲಸಕ್ಕೆ ಬರಲ್ಲ. ಅವರಿಗೆ ಕರ್ನಾಟಕದಲ್ಲಿ ಅಥವಾ ಭಾರತದಲ್ಲಿ ಉದ್ಯೋಗ ಸಿಗುವುದಿಲ್ಲ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಿಜೆಪಿ ಸರ್ವನಾಶ ಮಾಡಿದೆ ಎಂದು ವಾಗ್ಧಾಳಿ ನಡೆಸಿದರು.
ನಂತರ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಕಾಲಭೈರವೇಶ್ವರನ ದರ್ಶನ ಪಡೆದರು. ಬಳಿಕ ರಾಹುಲ್ ಗಾಂಧಿ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿಯಾದರು.
ಮೊಬೈಲ್ ಬಳಕೆದಾರರೇ ಎಚ್ಚರ ; ವೈರಸ್ ಹೊತ್ತು ತರ್ತಿದೆ ಈ ಜನಪ್ರಿಯ ‘ಅಪ್ಲಿಕೇಷನ್’, ಇದ್ರೆ ತಕ್ಷಣ ತೆಗೆದುಹಾಕಿ