ಕೆಎನ್ ಎನ್ ನ್ಯೂಸ್ ಡೆಸ್ಕ್ : ಇತ್ತೀಚಿನ ಜೀವನ ಶೈಲಿಯಿಂದ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಇಂದಿನದಲ್ಲಿ ಆರೋಗ್ಯವಾಗಿರಲು ತುಂಬಾ ಕಷ್ಟ ಪಡಬೇಕಾಗಿದೆ.
Health Tips ; ಗಂಟಲು ನೋವು ಇದ್ಯಾ.? ಈ ಟಿಪ್ಸ್ ಅನುಸರಿಸಿ, ಕ್ಷಣದಲ್ಲೇ ಮುಕ್ತಿ ಸಿಗುತ್ತೆ
ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಲ್ಲಿ ಮಾತ್ರ ಎಲ್ಲವೂ ನಮ್ಮನ್ನು ಹುಡುಕಿ ಬರುತ್ತದೆ.
ಇಂದಿನ ದಿನಗಳಲ್ಲಿ ಎಲ್ಲರೂ ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಅದರಲ್ಲೂ ದಪ್ಪ ಇದ್ದರೆ ನಾನಾ ಆರೋಗ್ಯ ಸಮಸ್ಯೆಗಳು ಕಾಡುವುದರಿಂದ ದೇಹದ ತೂಕ ಇಳಿಸಲು ನಾನಾ ಕಸರತ್ತು ಮಾಡುತ್ತಾರೆ. ಆಹಾರ ಪಥ್ಯದಿಂದ ಹಿಡಿದು ಜಿಮ್ನಲ್ಲಿ ಗಂಟೆಗಟ್ಟಲೆ ಬೆವರುವವರೆಗೆ ತೂಕ ಇಳಿಸಿಕೊಳ್ಳಲು ಹಲವು ಮಾರ್ಗಗಳಿವೆ.
Health Tips ; ಗಂಟಲು ನೋವು ಇದ್ಯಾ.? ಈ ಟಿಪ್ಸ್ ಅನುಸರಿಸಿ, ಕ್ಷಣದಲ್ಲೇ ಮುಕ್ತಿ ಸಿಗುತ್ತೆ
ಇದಕ್ಕಾಗಿ ಜನರು ಮೆಟ್ಟಿಲುಗಳನ್ನೂ ಹತ್ತುತ್ತಾರೆ. ಮೆಟ್ಟಿಲು ಹತ್ತಿ ಇಳಿಯುವುದು ತೂಕ ಇಳಿಸಲು ಎಲ್ಲಕ್ಕಿಂತ ಉತ್ತಮ ಮಾರ್ಗ ಎಂದು ಜನರು ನಂಬುತ್ತಾರೆ. ಆದರೆ ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಅದರಿಂದ ಲಾಭಕ್ಕಿಂತ ಸಮಸ್ಯೆಯೇ ಹೆಚ್ಚು ಎನ್ನಬಹುದು.
* ಮೆಟ್ಟಿಲುಗಳನ್ನು ಹತ್ತಿ ಇಳಿಯುವಾಗ ನೀವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೀರಿ. ಈ ಕಾರಣದಿಂದಾಗಿ, ನಿಮ್ಮ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ತೂಕ ಕಳೆದುಕೊಳ್ಳಲು, 5 ರಿಂದ 7 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದನ್ನು ವ್ಯಾಯಾಮವಾಗಿ ಮಾಡಬಹುದು. ಆದರೆ ಮೆಟ್ಟಿಲು ಹತ್ತುವಾಗ ಅಥವಾ ಇಳಿಯುವಾಗ ಅತಿ ವೇಗ ಒಳ್ಳೆಯದಲ್ಲ. ಓಡುವ ಬದಲಿಗೆ ನಿಧಾನವಾಗ ನಡೆದೇ ಮೆಟ್ಟಿಲು ಹತ್ತಿ ನಿಧಾನವಾಗಿ ಇಳಿಯಿರಿ.
*ಮೆಟ್ಟಿಲುಗಳನ್ನು ಹತ್ತುವಾಗ, ಒಮ್ಮೆಗೆ ಒಂದು ಅಥವಾ ಎರಡು ಮೆಟ್ಟಿಲುಗಳನ್ನು ಹತ್ತಲು ಪ್ರಯತ್ನಿಸಿ. ಆದರೆ, ಇಳಿಯುವಾಗ ಒಂದೊಂದೇ ಮೆಟ್ಟಿಲು ಇಳಿಯಿರಿ. ಹಾಗೇ ಮೆಟ್ಟಿಲುಗಳ ಅಂತರ ಬಹಳ ಕಡಿಮೆ ಹಾಗೂ ಹೆಚ್ಚಾಗಿರಬಾದರು. ಅಂತಹ ಕಡೆ ನೀವು ವ್ಯಾಯಾಮ ಮಾಡಿದರೆ ಒಳ್ಳೆಯದು. ಈ ವ್ಯಾಯಾಮವನ್ನು ಮಾಡುವುದರಿಂದ, ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತೀರಿ ಜೊತೆಗೆ ಬೇಗ ಹೊಟ್ಟೆಯ ಬೊಜ್ಜು ಕೂಡಾ ಕಡಿಮೆಆಗುತ್ತದೆ.