ಚೆನ್ನೈ : ‘ಚೆಲ್ಲಮ್ಮ’ ಧಾರಾವಾಹಿ ಖ್ಯಾತಿಯ ಧಾರಾವಾಹಿ ನಟ ಅರ್ನವ್ ಮತ್ತು ಕರ್ನಾಟಕ ಮೂಲದ ಕಿರುತೆರೆ ನಟಿ ದಿವ್ಯಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, “ಪತ್ನಿ ದಿವ್ಯಾ ಗರ್ಭಪಾತ “ಮಾಡಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪತಿ ಅರ್ನವ್ ದೂರು ದಾಖಲಿಸಿದ್ದಾರೆ
BREAKING NEWS: ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ
ಈ ಜೋಡಿಯು 6 ವರ್ಷಗಳಿಂದ ಸಂಬಂಧದಲ್ಲಿದ್ದರು. ಕಳೆದ ಜೂನ್ನಲ್ಲಿ ಅವರು ವಿವಾಹವಾದರು. ಚೆನ್ನೈ ಉತ್ತರ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯಲ್ಲಿ ತಮ್ಮ ವಿವಾಹ ನೋಂದಾಯಿಸಿಕೊಂಡರು. ಮತ್ತು ದಿವ್ಯಾ ಕೂಡ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ದಿವ್ಯಾ ಗರ್ಭಿಣಿಯಾಗುವವರೆಗೂ ಅವರು ಶಾಂತಿಯುತ ದಾಂಪತ್ಯ ಜೀವನ ನಡೆಸುತ್ತಿದ್ದರು.
BREAKING NEWS: ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ
ಆದ್ರೀಗ ದಿವ್ಯಾ ತನ್ನ ಪತಿ ಅರ್ನವ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪತಿ ಅರ್ನವ್ ಪ್ರತಿಕ್ರಿಯಿಸಿ, ನನ್ನ ಒಪ್ಪಿಗೆಯಿಲ್ಲದೇ ತಮ್ಮ ಮಗುವಿನ ಗರ್ಭಪಾತ ಮಾಡಲು ಯತ್ನಿಸಿದ್ದಾರೆ, ಈಗಾಗಲೇ ಗರ್ಭಪಾತ ಆಗಿದೆ ಎಂದು ಆರೋಪಿಸಿದ್ದಾರೆ.
ದಿವ್ಯಾರ ಆರೋಪವನ್ನು ಒಪ್ಪದ ಅರ್ನವ್ ಆವಡಿ ಪೊಲೀಸ್ ಕಮಿಷನರೇಟ್ನಲ್ಲಿ ದೂರು ನೀಡಿದ್ದಾರೆ. “ನನ್ನ ಪತ್ನಿ ಸ್ನೇಹಿತ ಈಶ್ವರ್ ಎಂಬಾತನ ಜೊತೆ ಸೇರಿಕೊಂಡು ಗರ್ಭಪಾತ ಮಾಡಿಸಿದ್ದಾರೆ. ಹಾಗಾಗಿ ದಿವ್ಯಾ ಮತ್ತು ಆಕೆಯ ಸ್ನೇಹಿತ ಈಶ್ವರ್ ಮತ್ತು ಅವರಿಗೆ ಸಹಾಯ ಮಾಡಿದ ವೈದ್ಯರ ಮೇಲೆ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಅರ್ನವ್ ಉಲ್ಲೇಖಿಸಿದ್ದಾರೆ.
ದಿವ್ಯಾ ಆರೋಪದ ಬಗ್ಗೆ ನಟ ಹೇಳುವುದೇನು?: ದೂರು ಕೊಟ್ಟ ಬೆನ್ನಲ್ಲೇ ಸುದ್ದಿಗಾರರನ್ನು ಭೇಟಿ ಮಾಡಿದ ನಟ ಅರ್ನವ್, ನನಗೆ ನನ್ನ ಹೆಂಡತಿ ದಿವ್ಯಾಳ ಹಿಂದಿನ ವೈವಾಹಿಕ ಜೀವನದ ಬಗ್ಗೆ ನಮ್ಮ ಮದುವೆಯ ದಿನದಂದು ತಿಳಿಯಿತು. ಅದನ್ನು ಕೇಳಿ ನನಗೆ ಆಘಾತವಾಯಿತು. ಆದರೂ ನಾನು ನನ್ನ ಪ್ರೀತಿ ಉಳಿಸಿಕೊಳ್ಳಲು ಅವರನ್ನು ಒಪ್ಪಿಕೊಂಡೆ.
BREAKING NEWS: ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ
ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ನನ್ನ ಬಳಿ ಅದಕ್ಕೆ ಬೇಕಾದ ಪುರಾವೆಗಳಿವೆ. ಪೊಲೀಸರಿಗೆ ಬೇಕಾದಾಗ ನಾನು ಪುರಾವೆ ನೀಡಲು ಸಿದ್ಧನಿದ್ದೇನೆ. ನನ್ನ ಹೊಡೆತದಿಂದ ಎಂದು ಆರೋಪಿಸಿ ಅವರು ಗರ್ಭಪಾತ ಮಾಡಿದ್ದಾರೋ ಅಥವಾ ಅವಳ ಸ್ನೇಹಿತ ಈಶ್ವರ್ ನಮ್ಮ ಮಗುವಿನ ಗರ್ಭಪಾತ ಮಾಡಿಸಿದ್ದಾನೋ ಎಂದು ನನಗೆ ಇನ್ನೂ ಅನುಮಾನವಿದೆ. ಈಶ್ವರ್ ಒಳ್ಳೆಯವರಂತೆ ನಟಿಸಿ ನನಗೆ ಮೋಸ ಮಾಡಿದ್ದಾನೆ. ನನಗೆ ಹಲವಾರು ಬಾರಿ ಬೆದರಿಕೆ ಹಾಕಿದ್ದಾನೆ. ನಾನು ಅವಳಿಂದ ಬೇರ್ಪಡುವ ಮಾತನ್ನು ಹೇಳಲಿಲ್ಲ, ನಾನು ಯಾವಾಗಲೂ ನನ್ನ ಹೆಂಡತಿಯೊಂದಿಗೆ ಇರಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.
ನಟಿ ಕರ್ನಾಟಕ ಮೂಲದ ದಿವ್ಯಾ ಮಾಡಿದ ಆರೋಪವೇನು?: ನಿನ್ನೆ ನಟಿ ದಿವ್ಯಾ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಕೊರೊನಾ ಅವಧಿಯಲ್ಲಿ ಅರ್ನವ್ ನಿರುದ್ಯೋಗಿಯಾಗಿದ್ದರು. ಆದರೆ, ನಾನು ಕೆಲಸಕ್ಕೆ ಹೋಗಿ ಅರ್ನವ್ ಅವರನ್ನು ನೋಡಿಕೊಂಡೆ ಮತ್ತು ಮನೆ ಕಟ್ಟಲು ಹಣ ನೀಡಿದ್ದೇನೆ. ಅಲ್ಲದೇ, ಅರ್ನವ್ ಇನ್ನೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿತ್ತು. ನಂತರ ನಾನು ನಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದೇನೆ. ಇದೇ ನಮ್ಮ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೇ, ನಾನು ಗರ್ಭಿಣಿ ಎಂದೂ ಯೋಚಿಸದೇ ಅರ್ನವ್ ಥಳಿಸಿದ್ದಾರೆ ಎಂದು ಆರೋಪಿಸಿದ್ದರು.