ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರು ರಾಜ ರಾಜ ಚೋಳ ಹಿಂದೂ ರಾಜನಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ ಬೆನ್ನಲ್ಲೇ ನಟ ಕಮಲ್ ಹಾಸನ್( Kamal Haasan) ನಿರ್ದೇಶಕರ ಹೇಳಿಕೆಯನ್ನು ಬೆಂಬಲಿಸಿದ್ದಾರೆ.
ಚೋಳ ಸಾಮ್ರಾಜ್ಯದ ರಾಜನ ಜೀವನಾಧಾರಿತ ‘ಪೊನ್ನಿಯಿನ್ ಸೆಲ್ವನ್-1’ ಚಿತ್ರವು ದೇಶಾದ್ಯಂತ ಮೆಚ್ಚುಗೆ ಪಡೆದಿದೆ. ಈ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ 300 ಕೋಟಿ ರೂ. ದಾಟಿದೆ. ಇದೇ ಚಿತ್ರದಲ್ಲಿ ರಾಜರಾಜ ಚೋಳನ ಬಗ್ಗೆಯೂ ಚರ್ಚೆ ನಡೆದಿದೆ. ಮೊದಲನೆಯ ರಾಜರಾಜ ಚೋಳನು ಈ ಸಾಮ್ರಾಜ್ಯದ ಅತ್ಯಂತ ವೈಭವೋಪೇತ ರಾಜರಲ್ಲಿ ಒಬ್ಬನಾಗಿದ್ದನು.
ಚಿತ್ರ ಬಿಡುಗಡೆಯಾದ ಕೆಲವು ದಿನಗಳ ನಂತರ, ತಮಿಳು ನಿರ್ದೇಶಕ ವೆಟ್ರಿಮಾರನ್ ಚೋಳ ರಾಜವಂಶದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆಟ್ರಿಮಾರನ್, ʻರಾಜರಾಜ ಚೋಳ ಹಿಂದೂ ರಾಜನಾಗಿರಲಿಲ್ಲ. ನಮ್ಮ ಚಿಹ್ನೆಗಳು ನಿರಂತರವಾಗಿ ನಮ್ಮಿಂದ ಕಸಿದುಕೊಳ್ಳುತ್ತಿವೆ. ತಿರುವಳ್ಳುವರನ್ನು ಕೇಸರಿ ಬಣ್ಣ ಮಾಡುವುದು ಅಥವಾ ರಾಜರಾಜ ಚೋಳನನ್ನು ಹಿಂದೂ ರಾಜ ಎಂದು ಕರೆಯುವುದು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದೆ. ಸಿನಿಮಾ ಜನ ಸಾಮಾನ್ಯರದ್ದು ಹಾಗಾಗಿ ಇದರ ಹಿಂದಿರುವ ರಾಜಕೀಯ ಅರ್ಥ ಮಾಡಿಕೊಳ್ಳಬೇಕುʼ ಎಂದಿದ್ದರು.
World Cotton Day 2022: ಇಂದು ʻವಿಶ್ವ ಹತ್ತಿ ದಿನʼ: ಹತ್ತಿಯ ಬಗ್ಗೆ 5 ಆಸಕ್ತಿದಾಯಕ ವಿಷಯಗಳು ಇಲ್ಲಿದೆ ನೋಡಿ!
ಈ ವಿವಾದದ ಬೆನ್ನಲ್ಲೇ ನಟ ಕಮಲ್ ಹಾಸನ್ ನಿರ್ದೇಶಕರ ಹೇಳಿಕೆಯನ್ನು ಬೆಂಬಲಿಸಿದ್ದು, ʻರಾಜ ರಾಜ ಚೋಳನ ಕಾಲದಲ್ಲಿ ‘ಹಿಂದೂ ಧರ್ಮ’ ಎಂಬ ಹೆಸರಿರಲಿಲ್ಲ. ಆಗ ವೈನವಂ, ಶೈವಂ ಮತ್ತು ಸಮಾನಂ ಇತ್ತು. ಆದ್ರೆ, ಅದನ್ನು ಹೇಗೆ ಉಲ್ಲೇಖಿಸಬೇಕೆಂದು ತಿಳಿಯದೇ ಬ್ರಿಟಿಷರು ಅದನ್ನುʻಹಿಂದೂʼ ಎಂದು ಕರೆದರು. ಅವರು ತುತ್ತುಕುಡಿಯನ್ನು ಟುಟಿಕೋರಿನ್ ಆಗಿ ಬದಲಾಯಿಸಿದಂತೆಯೇ ಇದನ್ನೂ ಬದಲಾಯಿಸಿದ್ದಾರೆʼ ಎಂದಿದ್ದಾರೆ.
ವೆಟ್ರಿಮಾರನ್ ಹೇಳಿಕೆಗೆ ಬಿಜೆಪಿ ಮುಖಂಡ ಹೆಚ್ ರಾಜಾ ತಿರುಗೇಟು ನೀಡಿದ್ದಾರೆ. ರಾಜ ರಾಜ ಚೋಳನ್ ಹಿಂದೂ ರಾಜನೇ ಆಗಿದ್ದ. ʻನಾನು ವೆಟ್ರಿ ಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ. ಆದರೆ, ಅವರು ರಾಜ ರಾಜ ಚೋಳನ್ ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ತೋರಿಸಲಿ. ಅವರು ತಮ್ಮನ್ನು ಶಿವಪಾದ ಶೇಖರನ್ ಎಂದು ಕರೆದುಕೊಂಡಿದ್ದರು. ಆಗ ಆತ ಹಿಂದೂ ಅಲ್ಲವೇ? ʼಎಂದು ಪ್ರಶ್ನಿಸಿದ್ದಾರೆ.
ಈ ವಿವಾದ ಭುಗಿಲೆದ್ದ ನಂತರ ಕಮಲ್ ಹಾಸನ್ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಮಲ್ ಹಾಸನ್ ಅವರು ಒಂದು ಕಾಲದಲ್ಲಿ ಕ್ರಿಸ್ತನ ವಾಕ್ಯವನ್ನು ಜಗತ್ತಿಗೆ ಸಾರುತ್ತಿದ್ದರು ಎಂದು ಹೇಳಿದ್ದಾರೆ.
I was working with Christian Arts and Communication Center, spreading the word of Christ…to the world ~ Kamal Haasan pic.twitter.com/cS0iFaqPjq
— Anshul Saxena (@AskAnshul) October 6, 2022
BREAKING NEWS: ಆಕಾಶದೀಪ ಧಾರಾವಾಹಿ ನಟಿ ದಿವ್ಯಾಗೆ ʼನಾನು ಯಾವ ಹಲ್ಲೆ ಮಾಡಿಲ್ಲʼ : ಪತಿ ಅಮ್ಜದ್ ಖಾನ್ ಸ್ಪಷ್ಟನೆ
BREAKING NEWS: ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ