ಬೆಂಗಳೂರು: ಕನ್ನಡ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಹಾಗೂ ನಟ ಅಮ್ಜದ್ ಖಾನ್ ಬಾಳಿನಲ್ಲಿ ಬಿರುಕು ಮೂಡಿದೆ. ಪತಿ ಅಮ್ಜದ್ ಖಾನ್ ವಿರುದ್ಧ ದಿವ್ಯಾ ಅನೇಕ ಆರೋಪಗಳನ್ನು ಮಾಡಿದ್ದಾರೆ. ಇದೀಗ ಆ ಆರೋಪಗಳಿಗೆ ಪತಿ ಅಮ್ಜದ್ ಖಾನ್ ತಳ್ಳಿ ಹಾಕಿದ್ದಾರೆ. ನಾನು ಆಕೆ ಮೇಲೆ ಯಾವ ಹಲ್ಲೆಯನ್ನೂ ನಡೆಸಿಲ್ಲ.
BREAKING NEWS: ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ
ಬೇಕಾದ್ರೆ ನಮ್ಮ ಮನೆಯ ಸಿಸಿ ಕ್ಯಾಮರಾ ಚೆಕ್ ಮಾಡಿ. ಆಕೆ ಕೆಲವು ಕೆಟ್ಟ ಸ್ನೇಹಿತರ ಜೊತೆ ಸೇರಿ ಇದೆಲ್ಲಾ ಮಾಡ್ತಿದ್ದಾಳೆ.ಅಬಾರ್ಷನ್ ಮಾಡಿಸಲು ನಾಟಕ ಆಡ್ತಿರೋ ಹಾಗಿದೆ. ಏನೇ ಆದ್ರೂ ನನಗೆ ಮಗು ಬೇಕೇ ಬೇಕು. ಕಮಿಷನರ್ಗೆ ದೂರು ನೀಡಲು ರೆಡಿಯಾಗಿದ್ದೇನೆ’ ಎಂದು ಅಮ್ಜದ್ ಖಾನ್ ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ?
2017ರಿಂದ ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಇಬ್ಬರು ಪ್ರೀತಿ ಮಾಡುತ್ತಿದ್ದರು. ಕೊರೊನಾದಿಂದ ಲಾಕ್ ಡೌನ್ ಆಗಿದ್ದ ಸಮಯಲ್ಲಿ ಅಮ್ಜದ್ ಸಂಕಷ್ಟದಲ್ಲಿದ್ದರು. ಈ ವೇಳೆ ದಿವ್ಯಾ ಸಹಾಯ ಮಾಡಿದ್ದರು ಎನ್ನಲಾಗಿದೆ. ಲಾಕ್ಡೌನ್ ನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಮದುವೆ ನಂತರ ಇಬ್ಬರೂ ಚೆನ್ನೈನಲ್ಲಿ ನೆಲೆಸಿದ್ದರು. ಈಗ ಇವರ ಸಂಸಾರದ ಜಗಳ ಬೀದಿಗೆ ಬಂದಿದೆ.
BREAKING NEWS: ಪರೇಶ್ ಮೇಸ್ತ ಪ್ರಕರಣ ʼಮರು ತನಿಖೆಗೆ ನಿಶ್ಚಿತʼ; ಗೃಹ ಸಚಿವ ಆರಗ ಜ್ಞಾನೇಂದ್ರ
‘ದಿವ್ಯಾ 3 ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದಿದ್ದರೂ ಕೂಡ ಅಮ್ಜದ್ ಖಾನ್ ಅವರು ಹೊಟ್ಟೆಗೆ ಒದ್ದಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ. ಸದ್ಯ ದಿವ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪೊಲೀಸರು ಅವರ ಹೇಳಿಕೆ ಪಡೆದಿದ್ದಾರೆ. ಅವರು ಆಸ್ಪತ್ರೆಯಿಂದ ಆಚೆಬಂದ ಮೇಲೆ ಪೊಲೀಸರಿಗೆ ದೂರು ಕೊಡುತ್ತೇವೆ’ ಎಂದು ದಿವ್ಯಾ ಪರ ವಕೀಲರು ಮಾಹಿತಿ ನೀಡಿದ್ದಾರೆ.