ಬೀದರ್: ಬೀದರ್ನಲ್ಲಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ಬುಧವಾರ ರಾತ್ರಿ ಪಾರಂಪರಿಕ ಮದರಸಾವೊಂದಕ್ಕೆ ಮದರಸಾ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ‘ಜೈ ಶ್ರೀ ರಾಮ್’ ಘೋಷಣೆ ಕೂಗಿದ್ದಲ್ಲದೆ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಪೂಜೆ ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿ 9 ಮಂದಿ ವಿರುದ್ಧ ದೂರು ದಾಖಲಾಗಿದೆ.
BIGG NEWS: ಸಿದ್ದರಾಮಯ್ಯ ಸುಳ್ಳನ್ನೇ ಮನೆ ದೇವ್ರು ಮಾಡಿಕೊಂಡಿದ್ದಾರೆ; ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಗರಂ
ಆರೋಪಕ್ಕೆ ಸಂಬಂಧಿಸಿ 9 ಮಂದಿ ವಿರುದ್ಧ ಬೀದರ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಖಂಡಿಸಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಈ ಸಂಬಂಧ ಒಂಬತ್ತು ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಬೀದರ್ನ ಹಲವಾರು ಮುಸ್ಲಿಂ ಸಂಘಟನೆಗಳು ಘಟನೆಯನ್ನು ಖಂಡಿಸಿವೆ. ಶುಕ್ರವಾರ(ಇಂದು)ದೊಳಗೆ ಅವರನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಂ ಸಂಘಟನೆಗಳು ಬೆದರಿಕೆ ಹಾಕಿವೆ.
BIGG NEWS: ಸಿದ್ದರಾಮಯ್ಯ ಸುಳ್ಳನ್ನೇ ಮನೆ ದೇವ್ರು ಮಾಡಿಕೊಂಡಿದ್ದಾರೆ; ಸಿದ್ದರಾಮಯ್ಯ ವಿರುದ್ಧ ಸಿ.ಟಿ ರವಿ ಗರಂ
ಇನ್ನು 1460 ರ ದಶಕದಲ್ಲಿ ನಿರ್ಮಿಸಲಾದ ಬೀದರ್ನಲ್ಲಿರುವ ಮಹ್ಮದ್ ಗವಾನ್ ಮದರಸಾವು ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಗೊತ್ತುಪಡಿಸಿದ ಪಾರಂಪರಿಕ ತಾಣವಾಗಿದೆ. ಈ ರಚನೆಯನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳಲ್ಲಿ ಪಟ್ಟಿಮಾಡಲಾಗಿದೆ.
ಪೂಜೆ ಮಾಡಲು ಒಳಗೆ ಈ ಗುಂಪು ಮದರಸಾದ ಬೀಗ ಒಡೆದು ಒಳಗೆ ನುಗ್ಗಿದೆ. ಇದಕ್ಕೂ ಮುನ್ನ ಮದರಸಾದ ಮೆಟ್ಟಿಲುಗಳ ಮೇಲೆ ನಿಂತು ಅವರು “ಜೈ ಶ್ರೀ ರಾಮ್” ಮತ್ತು “ಹಿಂದೂ ಧರ್ಮ ಜೈ” ಘೋಷಣೆಗಳನ್ನು ಕೂಗಿದ್ದಾರೆ. ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.