ಕಲಬುರಗಿ: ಜಿಲ್ಲೆಯ ಆಳಂದ ತಾಲೂಕು ಆರೋಗ್ಯಾಧಿಕಾರಿ ವಿರುದ್ಧ ಸರ್ಕಾರಿ ಕಾರ್ಯಾಲಯದ ಖಾತೆಯಿಂದ 2 ಲಕ್ಷ ಹಣ ಅಕ್ರಮವಾಗಿ ಡ್ರಾ ಮಾಡಿಕೊಂಡ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕು ಗಾಣಗಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಳಂದ ತಾಲೂಕು ಆರೋಗ್ಯಾಧಿಕಾರಿ ಸುಶೀಲ್ ಕುಮಾರ ಅಂಬೂರೆ ವಿರುದ್ಧ ತಾಲ್ಲೂಕಿನ ಗೊಬ್ಬೂರ್ (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಅಬ್ದುಲ್ ಅಜೀಜ್ ದೂರು ನೀಡಿದ್ದಾರೆ. ಈ ಹಿಂದೆ ಗೊಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿದ್ದ ಡಾ.ಸುಶೀಲಕುಮಾರ್ ಅಂಬೂರೆ ಅವರು 2021 ರಲ್ಲಿ ಗೊಬ್ಬುರು ಬಿ ಯಿಂದ ಆಳಂದಗೆ ವರ್ಗಾವಣೆಯಾಗಿದ್ದರು. ವರ್ಗಾವಣೆಯಾದ ಮೇಲೂ ಅವರು ಹಣ ಡ್ರಾ ಮಾಡಿಕೊಂಡಿರುವುದಾಗಿ ಆರೋಪ ಮಾಡಲಾಗಿದ್ದು, ಸರ್ಕಾರಕ್ಕೆ ಡಾ.ಸುಶೀಲಕುಮಾರ್ ವಂಚನೆ ಮಾಡಿದ್ದಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.