BREAKING NEWS: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಿಕೆ ಬದ್ರರ್ಸ್ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಈ ವಿಚಾರವಾಗಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಇಡಿಯವರು ಸಮನ್ಸ್ ನೀಡಿದ್ದಾರೆ. ಹೀಗಾಗಿ ಇಂದು ನಾವು ವಿಚಾರಣೆಗೆ ಬಂದಿದ್ದೇವೆ.ನನಗೆ ಹಾಗೂ ನನ್ನ ತಮ್ಮನಿಗೆ ಇಡಿಯವರು ಸಮನ್ಸ್ ನೀಡಿದ್ದಾರೆ. ಬೇರೆ ಪ್ರಕರಣದಲ್ಲೂ ಇಡಿಯವರು ನಮಗೆ ಸಮನ್ಸ್ ಜಾರಿ ಮಾಡಿದ್ದಾರೆ ಎಂದಿದ್ದಾರೆ.
ಸೋಲಾರ ಹಗರಣದ ತನಿಖೆಯನ್ನ ಮಾಡಿ. ಸಿಬಿಐ ಸೇರಿ ಯಾವ ಸಂಸ್ಥೆಯಿಂದಲೂ ತನಿಖೆ ಮಾಡಲಿ. ಅವರು ಯಾವ ವಿಚಾರದ ಬಗ್ಗೆ ಕೇಳುತ್ತಾರೆ ನನಗೆ ಗೊತ್ತಿಲ್ಲ. ಆದರೆ ನಮಗೆ ಟೈಂ ಕೊಡಿ ಅಂದ್ರು ಇಡಿಯವರು ಕೇಳಲಿಲ್ಲ. ನಾವು ಕಾನೂನು ಗೌರವಿಸಿ ವಿಚಾರಣೆಗೆ ಆಗಮಿಸಿದ್ದೇನೆ ಎಂದರು.
ಈ ಪ್ರಕರಣದ ಸಂಬಂಧ ದಾಖಲೆ ನೀಡಲು ಸಿದ್ದನಿದ್ದೇನೆ . ರೈತರಿಂದ ಅಕ್ರಮವಾಗಿ ಭೂಮಿ ಪಡೆದಿದ್ದರೆ ಕ್ರಮ ಕೈಗೊಳ್ಳಲಿ. ತಪ್ಪಿದ್ದರೆ ನನ್ನ ಗಲ್ಲಿಗೆರಿಸಲಿ ಎಂದು ಹೇಳಿದ್ದಾರೆ.