ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಡಿಕೆ ಬದ್ರರ್ಸ್ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. 10.30ಕ್ಕೆ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ.
ಹೊಸ ಕೇಸ್ ಗಳಲ್ಲಿ ಡಿಕೆ ಸಹೋದರರಿಗೆ ಇಡಿ ಬುಲಾವ್ ನೀಡಿದ್ದಾರೆ. ವಿಚಾರಣೆಗಾಗಿ ಡಿ.ಕೆ ಸುರೇಶ್ ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ದೆಹಲಿಗೆ ತಡರಾತ್ರಿ ಆಗಮಿಸಿದ್ದಾರೆ. ಇಂದು ಇಡಿ ಮುಂದೆ ವಿಚಾರಣೆಗೆ ಸಿದ್ದರಿದ್ದಾರೆ. ದೆಹಲಿಯ ವಿದ್ಯುತ್ ಲೇನ್ ನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಲಿದ್ದಾರೆ.
ಇತ್ತ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಈ ಯಾತ್ರೆಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಸುರೇಶ್ ಗೆ ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಏಳು ಗಂಟೆಯಿಂದ ನಾಗಮಂಗಲದ ಮಲ್ಲೇನಹಳ್ಳಿಯಿಂದ ಯಾತ್ರೆ ಆರಂಭವಾಗಲಿದೆ.