ಮಂಡ್ಯ : ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆಗೆ ಸೋನಿಯಾ ಗಾಂಧಿ ಆಗಮಿಸಿದ್ದು, ಮಂಡ್ಯ ಜಿಲ್ಲೆಯ ನ್ಯಾಮನಹಳ್ಳಿ ಬಳಿ ಸೋನಿಯಾಗಾಂಧಿ ಪಾದಯಾತ್ರೆ ಸೇರಿಕೊಂಡಿದ್ದಾರೆ.
BIG NEWS : ತಮಿಳಿನ ಖ್ಯಾತ ಕಿರುತೆರೆ ನಟ ʻಲೋಕೇಶ್ ರಾಜೇಂದ್ರನ್ʼ ಆತ್ಮಹತ್ಯೆ | Lokesh Rajendran dies by suicide
ಇಂದು ಬೆಳಗ್ಗೆ ಪಾಂಡವಪರದ ಬೆಳ್ಳಾರೆ ಗ್ರಾಮದ ಬಳಿ ಮಹದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭವಾಗಿದ್ದು, ಇಂದಿನ ಯಾತ್ರೆಯಲ್ಲಿ ಮತ್ತೆ ಪೇ ಸಿಎಂ ಪ್ರದರ್ಶನ ಮಾಡಲಾಗಿದೆ. ನ್ಯಾಮನಹಳ್ಳಿಯಿಂದ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಸೋನಿಯಾಗಾಂಧಿಗೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕೆ.ಸಿ.ವೇಣುಗೋಪಾಲ್ ಸಾಥ್ ನೀಡಿದ್ದಾರೆ. ಹೀಗಾಗಿ ಬಿಗ್ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : KPSCಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಕ್ಟೋಬರ್ 3 ರಂದು ಐಕ್ಯತಾ ಯಾತ್ರೆ ಮೈಸೂರಿನ ಕಳಸ್ತವಾಡಿಯಿಂದ ಶ್ರೀರಂಗಪಟ್ಟಣ, ಕಿರಂಗೂರು ಮಾರ್ಗವಾಗಿ ಪಾಂಡವಪುರ ತಾಲೂಕಿನ ಕಿನ್ನಾಳು ಗ್ರಾಮವನ್ನು ತಲುಪಿತ್ತು. ಬಳಿಕ, ರಾಹುಲ್ ಗಾಂಧಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಕಬಿನಿ ಹಿನ್ನಿರು ಬಳಿ ಇರುವ ಆರೆಂಜ್ ಕೌಂಟಿ ರೆಸಾರ್ಟ್ ಗೆ ತೆರಳಿ, ತಾಯಿ ಸೋನಿಯಾ ಜೊತೆಗೆ ವಿಶ್ರಾಂತಿ ಪಡೆದಿದ್ದರು.