ಮೆಕ್ಸಿಕೋ: ಮೆಕ್ಸಿಕೋದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಮೇಯರ್ ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಮೆಕ್ಸಿಕೋದ ಸ್ಯಾನ್ ಮಿಗುಯೆಲ್ ಟೊಟೊಲಾಪನ್ನಲ್ಲಿರುವ(San Miguel Totolapan) ಸಿಟಿ ಹಾಲ್ನಲ್ಲಿ ದುಷ್ಕರ್ಮಿಗಳು ಮನಬಂದಂತೆ ಸಾಮೂಹಿಕ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಟೊಟೊಲಾಪಾನ್ ಮೇಯರ್ ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೆಲ ಬಂದೂಕುಧಾರಿಗಳು ಮೆಕ್ಸಿಕೋದ ನೈಋತ್ಯ ಭಾಗದಲ್ಲಿರುವ ಸ್ಯಾನ್ ಮಿಗುಯೆಲ್ ಟೊಟೊಲಾಪಾನ್ನಲ್ಲಿರುವ ಸಿಟಿ ಹಾಲ್ ಮತ್ತು ಹತ್ತಿರದ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
#Mexico Firing- Gunmen open fire at San Miguel Totolapan City Hall in southwest #MexicoCity , killing at least 10 people, including mayor of San Miguel #Shooting #Mayor pic.twitter.com/1nByAaWhnT
— Amit Shukla (@amitshuklazee) October 6, 2022
Mexican #Mayor among 18 dead in mass #shooting
Gunmen linked to organized crime have opened fire at city hall and a nearby home in San Miguel #Totolapan in southwest #Mexico pic.twitter.com/ZpQGGSNnFw
— Himanshu dixit 💙 (@HimanshuDixitt) October 6, 2022
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ಪ್ರಕಾರ ಇದು ಭಯೋತ್ಪಾದಕರ ದಾಳಿಯಲ್ಲ ಸ್ಥಳೀಯ ಅಪರಾಧಿಗಳ ಕೃತ್ಯ ಎಂದಿದ್ದಾರೆ. ಆದ್ರೆ, ಬುಧವಾರದ ದಾಳಿಯ ಜವಾಬ್ದಾರಿಯನ್ನು ʻಲಾಸ್ ಟೆಕ್ವಿಲೆರೋಸ್ʼ ಎಂಬ ಸಂಘಟನೆ ಹೊತ್ತುಕೊಂಡಿದೆ. ಅಷ್ಟೇ ಅಲ್ಲದೇ, ಲಾಸ್ ಟೆಕ್ವಿಲೆರೋಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಈ ದಾಳಿ ನಾವೇ ಮಾಡಿದ್ದು ಎಂದು ಹೇಳಿಕೊಂಡಿದೆ. ಆದ್ರೆ, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಯಾವುದೇ ತಕ್ಷಣದ ದೃಢೀಕರಣವಿಲ್ಲ.
BREAKING NEWS : ರಾಜ್ಯದಲ್ಲಿ 5 ದಿನ ಭಾರತ್ ಜೋಡೋ ಪಾದಯಾತ್ರೆ ಆರಂಭ : `ಪೇ ಸಿಎಂ’ ಪೋಸ್ಟರ್ ಪ್ರದರ್ಶನ
BREAKING NEWS : ದೇವರ ನಾಡಲ್ಲಿ ಭೀಕರ ರಸ್ತೆ ಅಪಘಾತ: KSRTC ಬಸ್- ಟೂರಿಸ್ಟ್ ಬಸ್ ನಡುವೆ ಡಿಕ್ಕಿ, 9 ಮಂದಿ ಸಾವು