ಬೆಂಗಳೂರು : ರಾಜ್ಯ ಸರ್ಕಾರವು ಅಡಿಕೆ ಬೆಳೆಗೆ ಬಾಧಿಸಿರುವ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಮುಂದಾಗಿದ್ದು, ಹಾನಿಗೊಳಗಾದ ಅಡಿಕೆ ತೋಟಗಳ ಮೊದಲನೇ ಸಿಂಪರಣೆಗಾಗಿ ರೈತರಿಗೆ ಉಚಿತವಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಲು ತೀರ್ಮಾನಿಸಿದೆ.
ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹವಾಮಾನ ವೈಪರೀತ್ಯದಿಂದ ಕೊಲೆಟೋಟ್ರಿಕಮ್ ಗ್ಲೋಯೋಸ್ಪೊರಿಯಿಡ್ಡ್ ಎಂಬ ಶಿಲೀಂಧ್ರದಿಂದ ಎಲೆ ಚುಕ್ಕಿ ರೋಗವು ತೀವ್ರವಾಗಿ ಗಾಳಿಯಲ್ಲಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಹಾನಿಗೊಳಗಾದ ಅಡಿಕೆ ತೋಟಗಳ ಮೊದಲನೇ ಸಿಂಪರಣೆಗಾಗಿ ರೈತರಿಗೆ ಉಚಿತವಾಗಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ವಿತರಿಸಲು ತೀರ್ಮಾನಿಸಿದೆ.