ಮಂಡ್ಯ : ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಇಂದು ಮತ್ತೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಿಂದ ಪುನಾರಂಭಗೊಳ್ಳಲಿದ್ದು,ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
BIGG NEWS : `ರುಪೇ ಕ್ರೆಡಿಟ್ ಕಾರ್ಡ್’ ಹೊಂದಿರುವವರಿಗೆ ಗುಡ್ ನ್ಯೂಸ್ : ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಾಪಸ್ಸು
ಅಕ್ಟೋಬರ್ 3 ರಂದು ಐಕ್ಯತಾ ಯಾತ್ರೆ ಮೈಸೂರಿನ ಕಳಸ್ತವಾಡಿಯಿಂದ ಶ್ರೀರಂಗಪಟ್ಟಣ, ಕಿರಂಗೂರು ಮಾರ್ಗವಾಗಿ ಪಾಂಡವಪುರ ತಾಲೂಕಿನ ಕಿನ್ನಾಳು ಗ್ರಾಮವನ್ನು ತಲುಪಿತ್ತು. ಬಳಿಕ, ರಾಹುಲ್ ಗಾಂಧಿ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಕಬಿನಿ ಹಿನ್ನಿರು ಬಳಿ ಇರುವ ಆರೆಂಜ್ ಕೌಂಟಿ ರೆಸಾರ್ಟ್ ಗೆ ತೆರಳಿ, ತಾಯಿ ಸೋನಿಯಾ ಜೊಎಗೆ ವಿಶ್ರಾಂತಿ ಪಡೆದಿದ್ದರು.
ಇಂದು ಕೆನ್ನಾಳು ಗ್ರಾಮದಿಂದ ಆರಂಭವಾಗಲಿರುವ ಪಾದಯಾತ್ರೆ, ಪಾಂಡವರಪುರ ತಾಲೂಕಿನ ಜಕ್ಕನಹಳ್ಳಿ ಸರ್ಕಲ್ ಮೂಲಕ ನಾಗಮಂಗಲ ತಾಲೂಕಿನ ಖರಡ್ಯ ಗ್ರಾಮವನ್ನು ಪ್ರವೇಶಿಸಲಿದೆ. ಮಧ್ಯಾಹ್ನ 12 ಗಂಟೆಗೆ ಚೌಡಗೋನಹಳ್ಳಿ ಗೇಟ್ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ.ಅಲ್ಲಿಂದ ಬ್ರಹ್ಮದೇವರಹಳ್ಳಿಯ ಎಂ.ಹೊಸೂರು ಗೇಟ್ ಹತ್ತಿರದ ಆಯುರ್ವೇದಿಕ್ ಕಾಳೇಜಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ.