ಜಲ್ಪೈಗುರಿ: ಪಶ್ಚಿಮ ಬಂಗಾಳದಲ್ಲಿ ‘ವಿಜಯದಶಮಿ’ ಸಂದರ್ಭದಲ್ಲಿ ದುರ್ಗಾ ದೇವಿ ವಿಗ್ರಹ ನಿಮಜ್ಜನ ವೇಳೆ ಜಲ್ಪೈಗುರಿ ಜಿಲ್ಲೆಯ ಮಾಲ್ ನದಿಯಲ್ಲಿ ಹಠಾತ್ ಪ್ರವಾಹ ಉಂಟಾದ ಪರಿಣಾಮ ಸುಮಾರು ಎಂಟು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ನಿನ್ನೆ ಸಂಜೆ ನಿಮಜ್ಜನ ಸಮಾರಂಭದಲ್ಲಿ ಭಾಗವಹಿಸಲು ನೂರಾರು ಜನರು ಮಾಲ್ ನದಿಯ ದಡದಲ್ಲಿ ಜಮಾಯಿಸಿದ ಸಂದರ್ಭದಲ್ಲಿ ಈ ದುರ್ಘಟನೆ ಘಟನೆ ನಡೆದಿದೆ.
#WATCH | WB: Flash flood hits Mal River in Jalpaiguri during Durga Visarjan; 7 people dead, several feared missing
Many people were trapped in river & many washed away. Bodies of 7 people were recovered. NDRF& civil defence deployed; rescue underway: Jalpaiguri SP Debarshi Dutta pic.twitter.com/cRT3nnp7Gz
— ANI (@ANI) October 5, 2022
“ದುರ್ಗಾ ದೇವಿ ವಿಗ್ರಹ ನಿಮಜ್ಜನ ವೇಳೆ ಇದ್ದಕ್ಕಿದ್ದಂತೆ ಹಠಾತ್ ಪ್ರವಾಹ ಅಪ್ಪಳಿಸಿತು. ಆಗ ಜನರು ಕೊಚ್ಚಿಹೋದರು. ಇದುವರೆಗೆ ಎಂಟು ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಸುಮಾರು 50 ಜನರನ್ನು ರಕ್ಷಿಸಿದ್ದೇವೆ” ಎಂದು ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡಾರಾ ತಿಳಿಸಿದ್ದಾರೆ.
“ಘಟನಾ ಸ್ಥಳಕ್ಕೆ ಎಸ್ಡಿಆರ್ಎಫ್, ಪೊಲೀಸ್ ಮತ್ತು ಸ್ಥಳೀಯ ಆಡಳಿತದ ತಂಡಗಳು ಆಗಿಸಿದ್ದು, ಶೋಧನೆ ಮತ್ತು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
BIGG NEWS : `ರುಪೇ ಕ್ರೆಡಿಟ್ ಕಾರ್ಡ್’ ಹೊಂದಿರುವವರಿಗೆ ಗುಡ್ ನ್ಯೂಸ್ : ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಾಪಸ್ಸು