ರಾಜಸ್ಥಾನ: ದುರ್ಗಾ ದೇವಿ ಮೂರ್ತಿಯ ನಿಮಜ್ಜನದ ವೇಳೆ ಮಳೆ ನೀರಿನಿಂದ ತುಂಬಿದ ಹಳ್ಳದಲ್ಲಿ ಐವರು ಮುಳುಗಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ನಡೆದಿದೆ.
ನಾಸಿರಾಬಾದ್ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ನಂದ್ಲಾ ಗ್ರಾಮದಲ್ಲಿ ಯುವಕರು ವಿಗ್ರಹ ನಿಮಜ್ಜನಕ್ಕೆ ತೆರಳಿದ್ದ ಘಟನೆ ನಡೆದಿದೆ.
ಯುವಕರು ಆಳವಿಲ್ಲದ ಹಳ್ಳ ಎಂದು ಭಾವಿಸಿ ಕೆಳಗೆ ಇಳಿದರು. ಆದರೆ ಕಂದಕವು ಆಳವಾಗಿದ್ದ ಪರಿಣಾಮ ಅದರಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಟೇಷನ್ ಹೌಸ್ ಆಫೀಸರ್ ಹೇಮರಾಜ್ ಹೇಳಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎನ್ನಲಾಗುತ್ತಿದೆ.
Karnataka Rains: ಬೆಂಗಳೂರಿನಲ್ಲಿ ಭಾರೀ ಮಳೆ; ಮೈಸೂರು ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಐಎಂಡಿ