ಜಾರ್ಖಂಡ್: ಕಲ್ಲಿದ್ದಲು ತುಂಬಿದ್ದ ಟ್ರಕ್ ಹರಿದು 4 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಜಾರ್ಖಂಡಿನ ರಾಮಗಢದಲ್ಲಿ ನಡೆದಿದೆ.
ರಾಮಗಢದ ಬರ್ಕಾಕಾನ ಪೆಟ್ರೋಲ್ ಪಂಪ್ ಬಳಿ ಅಪಘಾತ ಸಂಭವಿಸಿದ್ದು, ಕಲ್ಲಿದ್ದಲು ತುಂಬಿದ ಟ್ರಕ್ ಎರಡು ದ್ವಿಚಕ್ರವಾಹನಗಳು ಮತ್ತು ರಸ್ತೆಯಲ್ಲಿ ನಿಂತಿದ್ದ ಜನರ ಮೇಲೆ ಟ್ರಕ್ ಹರಿದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ನಾಲ್ವರು ಒಂದೇ ಕುಟುಂಬದವಾರಗಿದ್ದು, ಕುಟುಂಬವು ದಸರಾ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು ಎನ್ನಲಾಗುತ್ತಿದೆ.
ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
BIGG NEWS : ಉದ್ಯೋಗ ನೀಡುವುದಾಗಿ ವಂಚನೆ ; ‘ಮ್ಯಾನ್ಮಾರ್’ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ