ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮ ದೇಹಕ್ಕೆ(Body) ಪರಿಶುದ್ಧ ಹಾಲು (milk) ತುಂಬಾ ಒಳ್ಳೆಯದು. ಇದು ನಮ್ಮ ಆರೋಗ್ಯವನ್ನು(Health) ಸದಾ ಕಾಪಾಡುವುದು. ಹಾಲಿನಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ,(Calcium) ಸೋಡಿಯಂ, ಪ್ರೋಟೀನ್(Protein), ವಿಟಮಿನ್(Vitamin)(ಎ,ಕೆ ಮತ್ತು ಬಿ12), ಕೊಬ್ಬು, ಅಮಿನೋ ಆಮ್ಲ, ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇವೆ.
ಹೀಗಾಗಿ ಕೆಲವರು ಪ್ರತಿನಿತ್ಯ ಹಾಲು ಕುಡಿಯಬೇಕು ಎಂಬ ವಾದವನ್ನು ಮಾಡುತ್ತಾರೆ.. ಇಂತಹ ಪರಿಸ್ಥಿತಿಯಲ್ಲಿ ಹಾಲು ಕಲಬೆರಕೆಯಾಗಿದ್ದರೆ ನಮ್ಮ ಆರೋಗ್ಯದ ಮೇಲೆ ಹಾನಿಯಾಗಬಹುದು. ಹಾಗಾಗಿ ಹಾಲು ಕಲಬೆರಕೆಯಾಗಿದೆಯೋ ಅಥವಾ ಶುದ್ಧವಾಗಿದೆಯೋ ಅನ್ನೋದನ್ನು ಪತ್ತೆ ಹಚ್ಚೋದು ಹೇಗೆ ಅಂತಾ ಯೋಚಿಸುತ್ತಿದ್ದೀರಾ? ಈ ಕುರಿತ ಸಿಂಪಲ್ ಟಿಪ್ಸ್ ಇಲ್ಲಿದೆ ಓದಿ
ಸ್ಲಿಪ್ ಟೆಸ್ಟ್:
ಪರಿಶುದ್ಧ ಹಾಲಿನೊಂದಿಗೆ ಕಲಬೆರಕೆ ಹಾಲನ್ನು ಪತ್ತೆ ಹಚ್ಚೋದಕ್ಕಾಗಿ ನೀವು ಸ್ಲಿಪ್ ಪರೀಕ್ಷೆಯನ್ನು ಮಾಡಬಹುದು. ಇದಕ್ಕಾಗಿ ಒಂದು ಹನಿ ಹಾಲನ್ನು ತೆಗೆದುಕೊಂಡು ಅದನ್ನು ಮೃದುವಾದ ಸ್ಥಳದಲ್ಲಿ ಇರಿಸಿ. ಹಾಲು ಕೆಳಮುಖವಾಗಿ ಹರಡಿ ಅದರ ಹಿಂದೆ ಬಿಳಿ ಗುರುತುಗಳನ್ನು ಬಿಟ್ಟರೆ, ಹಾಲು ಶುದ್ಧವಾಗಿರುತ್ತದೆ. ಮತ್ತೊಂದೆಡೆ, ಹಾಲು ಹರಿಯುವಾಗ ಯಾವುದೇ ರೀತಿಯ ಗುರುತು ಬಿಡದಿದ್ದರೆ ಅದರಲ್ಲಿ ತುಂಬಾ ನೀರು ಬೆರೆಸಿರಬಹುದು. ಅಥವಾ ಬೇರೆ ಇನ್ನೇನಾದರೂ ಕಲಬೆರಕೆಯಾಗಿರಬಹುದು ಎಂದು ಅರ್ಥಮಾಡಿಕೊಳ್ಳಬೇಕಾಗಿದೆ.
ಉಜ್ಜುವ ಮೂಲಕ ಪರಿಶೀಲಿಸಿ
ಹಾಲಿನ ಕಲಬೆರಕೆಯನ್ನು ಗುರುತಿಸಲು, ಮೊದಲು ಕೈಗಳ ಮೇಲೆ ಕೆಲವು ಹನಿ ಹಾಲನ್ನು ತೆಗೆದುಕೊಂಡು ಅದನ್ನು ಉಜ್ಜಿಕೊಳ್ಳಿ, ಹಾಲು ಸಾಬೂನು ಅಥವಾ ತುಂಬಾ ಜಿಡ್ಡಿನಂತಿದ್ದರೆ, ಅದು ಸಿಂಥೆಟಿಕ್ ಹಾಲು ಆಗಿರಬಹುದು. ಹಾಲನ್ನು ಬಿಸಿ ಮಾಡಲು ಪ್ರಯತ್ನಿಸಿ, ಹಾಲು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ, ಹಾಲು ಕಲಬೆರಕೆಯಾಗಿದೆ ಎಂದರ್ಥ.
ಕಲಬೆರಕೆಗಾಗಿ ಡಿಟರ್ಜೆಂಟ್ ಬಳಸುತ್ತಾರಾ?
ಕೆಲವೊಮ್ಮೆ ಹಾಲಿಗೆ ಡಿಟರ್ಜೆಂಟ್ ಸೇರಿಸಿ ಕಲಬೆರಕೆ ಮಾಡಲಾಗುತ್ತದೆ. ಕಲಬೆರಕೆ ಹಾಲನ್ನು ಗುರುತಿಸಲು ಮೇಲಿನಿಂದ ಸ್ವಲ್ಪ ನೀರು ಹಾಕಿ. ಅದರಲ್ಲಿ ನೊರೆ ಬರಲಾರಂಭಿಸಿದರೆ ಹಾಲು ಕಲಬೆರಕೆ ಎಂದು ತಿಳಿಯುತ್ತದೆ.
ಅಯೋಡಿನ್ ಹನಿಗಳನ್ನು ಬಳಸಿ:
ಕಲಬೆರಕೆ ಹಾಲನ್ನು ಪತ್ತೆಹಚ್ಚಲು ನೀವು ಅಯೋಡಿನ್ ಹನಿಗಳನ್ನು ಬಳಸಬಹುದು. ಇದಕ್ಕಾಗಿ, ಹಾಲಿಗೆ ಕೆಲವು ಹನಿ ಅಯೋಡಿನ್ ಹನಿಗಳನ್ನು ಸೇರಿಸಿ, ಹಾಲಿನ ಬಣ್ಣವು ಬಿಳಿ ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾದರೆ, ಅದು ಕಲಬೆರಕೆಯಾಗಿದೆ ಎಂದು ಅರ್ಥಮಾಡಿಕೊಳ್ಳಿ
ಈ ಮೇಲಿನ ಕೆಲ ವಿಧಾನಗಳನ್ನು ಅನುರಿಸುವ ಮೂಲಕ ಹಾಲಿನ ಕಲಬೆರಕೆಯನ್ನು ಪತ್ತೆ ಹಚ್ಚಿ, ನೀವು ಪ್ರತಿನಿತ್ಯ ಅಹಾರವಾಗಿ ಬಳಕೆ ಮಾಡುವ ಹಾಲಿನಲ್ಲೂ ಕಲಬೆರಕೆಯಾಗಿದ್ರೆ ಕೂಡಲೇ ಎಚ್ಚೆತ್ತುಕೊಳ್ಳಿ.ಈ ರೀತಿ ಪತ್ತೆ ಹಚ್ಚುವ ಮೂಲಕ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಸರಿಸುವ ಅತ್ಯಗತ್ಯವಾಗಿದೆ.