ಬೆಳಗಾವಿ: ಹಿಂದಿನ ಸರ್ಕಾರ ಕೆಡವಿದ ರಮೇಶ ಜಾರಕಿಹೊಳಿಗೆ ಈ ಸರ್ಕಾರವನ್ನ ಕೆಡುವುದು ದೊಡ್ಡ ಮಾತಲ್ಲ. ರಮೇಶ ಜಾರಕಿಹೊಳಿ ಸಿಟ್ಟಾದ್ರೆ, ಏನಾದರೂ ಮಾಡಬಹುದು ಅನೋ ಭಯ ಬಿಜೆಪಿ ನಾಯಕರಿಗೆ ಇದೆ. ಹೀಗಾಗಿ ಮಂತ್ರಿಗಾಗಿ ಕಾಯ್ದು ಕುಳಿತ ರಮೇಶ್ ಜಾರಕಿಹೊಳಿ ಕಲ್ಲು ಹೊಡೆಯಬಾರದು ಎಂದು ಚಾಕೊಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
BIGG NEWS: ವಿಶ್ವವಿಖ್ಯಾತ ಜಂಬೂ ಸವಾರಿ ಕ್ಷಣಗಣನೆ: ಅರಮನೆಯಲ್ಲಿ ನಂದಿಧ್ವಜ ಪೂಜೆಗೆ ಚಾಲನೆ| mysure dasara
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷ ಕಟ್ಟಿದ ಯಡಿಯೂರಪ್ಪನನ್ನೇ ಸೈಡ್ ಲೈನ್ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ನೇತೃತ್ವ ಕೊಡ್ತಿಲ್ಲ. ಇನ್ನೂ ರಮೇಶ ಜಾರಕಿಹೊಳಿ ಯಾವ ಲೆಕ್ಕ?. ಬಿಜೆಪಿ ನಾಯಕರು ರಮೇಶ ಜಾರಕಿಹೋಳಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಮಂತ್ರಿಗಾಗಿ ಕಾಯ್ದು ಕುಳಿತ ರಮೇಶ್ ಕಲ್ಲು ಎಸೆಯಬಾರದು ಅಂತಾ ಚಾಕೊಲೇಟ್ ತಿನ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.