ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣ ಗಣನೆ ಶುರುವಾಗಿದೆ. ಈಗಾಗಲೇ ಜಂಬೂಸವಅರಿ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬಂದಿದೆ. ಸದ್ಯ ಜಂಬೂ ಸವಾರಿಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿದೆ.
ಪ್ರತಿ ಜಿಲ್ಲೆಗಳಿಂದ ಕಲಾ ತಂಡಗಳು ಆಗಮಿಸಿದ್ದಾರೆ. ೭೦ ಕ್ಕೂ ಹೆಚ್ಚೆ ಕಲಾತಂಡಗಳು ಕುಣಿತ ಪ್ರದರ್ಶನದಲ್ಲಿ ಭಾಗಿಯಾಗಿದೆ. ಈಗಾಗಲೇ ಅರಮನೆ ಬಳಿ ಕಲಾತಂಡಗಳು ಆಗಮಿಸಿದ್ದಾರೆ. ಜಗ್ಗಲಗಿ ಮೇಳ, ಜಾನಪದ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಬೇಡರ ವೇಷದ ಕುಣಿತ, ಪೂಜಾ ಕುಣಿತ, ಮರಗಾಲು ಕುಣಿತ, ಹಗಲುವೇಷ ಹಾಗೂ ಲಂಬಾಣಿ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳು ಆಗಮಿಸಿದೆ.
ಇನ್ನು ಜಂಬೂ ಸವಅರಿ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅರಮನೆ ಸುತ್ತುಮುತ್ತ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ.