ಸೊಲ್ಲಾಪುರ: ಪ್ರಸ್ತುತ ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಕುಸ್ತಿ ಪಂದ್ಯದಲ್ಲಿ ಗೆದ್ದು ಸಂಭ್ರಮಿಸುತ್ತಿದ್ದ ಯುವಕ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಪಂಢರಪುರ ತಾಲೂಕಿನಲ್ಲಿ ನಡೆದಿದೆ.
ಇಲ್ಲಿನ ವಖ್ರಿಯ ಕುಸ್ತಿಪಟು 22 ವರ್ಷದ ಮಾರುತಿ ಸುರ್ವಾಸೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ ರಾತ್ರಿ ಕೊಲ್ಹಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಕುಸ್ತಿ ಪಂದ್ಯದಲ್ಲಿ ಗೆದ್ದ ಮಾರುತಿ ಗೆದ್ದು ವಾಪಸ್ ಆಗಿದ್ದರು. ಕುಸ್ತಿಯಾಡಿದ ಎರಡರಿಂದ ಮೂರು ಗಂಟೆಗಳ ನಂತರ ಅವರಿಗೆ ಹೃದಯಾಘಾತವಾಗಿದೆ. ಈ ವೇಳೆ ಮಾರುತಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಮಾರುತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಾವಿಗೆ ಹೃದಯಾಘಾತವೇ ಕಾರಣ ಎಂದು ತಿಳಿದುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮೃತ ಮಾರುತಿ ತಂದೆ ವಾಖ್ರಿಯಲ್ಲಿ ಕೃಷಿಕರಾಗಿದ್ದಾರೆ. ಮಾರುತಿಗೆ ಬಾಲ್ಯದಿಂದಲೂ ಕುಸ್ತಿಯೆಂದರೆ ಒಲವು. ಕುಸ್ತಿಯಲ್ಲಿ ವೃತ್ತಿಜೀವನವನ್ನು ಮಾಡಲು, ಅವರನ್ನು ತರಬೇತಿಗಾಗಿ ಕೊಲ್ಲಾಪುರಕ್ಕೆ ಕಳುಹಿಸಲಾಗಿತ್ತು.
watch video: ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್ನಲ್ಲಿ ಭಯಾನಕ ಅಪಘಾತ, ದುರ್ಮರಣ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
BREAKING NEWS: ಆಗ್ರಾದ ಆರ್ ಮಧುರಾಜ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ವೈದ್ಯರ ಸಹಿತ ಮೂವರು ಸಾವು