ದುಬೈ: ಯುಎಇಯ ಸಹಿಷ್ಣುತೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸಿದ ನಂತರ ಜೆಬೆಲ್ ಅಲಿ ಪ್ರದೇಶದಲ್ಲಿ ಹಿಂದೂ ದೇವಾಲಯದ ದಶಕದ ಭಾರತೀಯ ಕನಸು ಮಂಗಳವಾರ ನನಸಾಗಿದೆ ಅಂತ ಹೇಳಿದರು.
“ಯುಎಇಯ ಸಹಿಷ್ಣುತೆ ಸಚಿವ ಎಚ್.ಎಚ್.ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಇಂದು ದುಬೈನ ಬೆರಗುಗೊಳಿಸುವ ಮತ್ತು ಹೊಸ ಹಿಂದೂ ಮಂದಿರವನ್ನು (ದೇವಾಲಯ) ಉದ್ಘಾಟಿಸಿದರು” ಎಂದು ಯುಎಇ ನಿವಾಸಿ ಹಸನ್ ಸಜ್ವಾನಿ ಟ್ವೀಟ್ ಮಾಡಿದ್ದಾರೆ. ದಸರಾ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಇದನ್ನು ಉದ್ಘಾಟಿಸಲಾಯಿತು ಮತ್ತು ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ತನಕ ವಿಸ್ತರಣೆಯಾಗಿದೆ.
ಅಂದ ಹಾಗೇ ಫೆಬ್ರವರಿ 2020 ರಲ್ಲಿ ದೇವಾಲಯದ ಅಡಿಪಾಯವನ್ನು ಹಾಕಲಾಯಿತು. ದಸರಾ ಹಬ್ಬದ ದಿನವಾದ ಇಂದಿನಿಂದ ಅಧಿಕೃತವಾಗಿ ಸಾರ್ವಜನಿಕರಿಗೆ ತೆರೆದಿರುವ ಈ ದೇವಾಲಯವು ಎಲ್ಲಾ ಧರ್ಮಗಳ ಜನರನ್ನು ಸ್ವಾಗತಿಸುತ್ತದೆ ಮತ್ತು 16 ದೇವತೆಗಳ ಇತರ ಒಳಾಂಗಣ ಕೆಲಸಗಳನ್ನು ವೀಕ್ಷಿಸಲು ಭಕ್ತರು ಮತ್ತು ಇತರ ಸಂದರ್ಶಕರಿಗೆ ಪ್ರವೇಶವನ್ನು ಅನುಮತಿಸಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ದೇವಾಲಯದ ಆಡಳಿತ ಮಂಡಳಿಯು ತನ್ನ ವೆಬ್ಸೈಟ್ ಮೂಲಕ ಕ್ಯೂಆರ್-ಕೋಡ್-ಆಧಾರಿತ ಅಪಾಯಿಂಟ್ಮೆಂಟ್ ಬುಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ದೇವಾಲಯವು ಮೊದಲ ದಿನದಿಂದ, ವಿಶೇಷವಾಗಿ ವಾರಾಂತ್ಯಗಳಲ್ಲಿ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ. ಜನಸಂದಣಿ ನಿರ್ವಹಣೆಗೆ ಮತ್ತು ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ಕ್ಯೂಆರ್-ಕೋಡೆಡ್ ಅಪಾಯಿಂಟ್ಮೆಂಟ್ಗಳ ಮೂಲಕ ನಿರ್ಬಂಧಿತ ಪ್ರವೇಶವನ್ನು ನಿಯಂತ್ರಿಸಲಾಗಿದೆ ಎಂದು ವರದಿ ತಿಳಿಸಿದೆ.