ಧಾರವಾಡ : ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8) ನೇಮಕಾತಿ 2022 ರ ಕುರಿತು 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗಲು ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪದವೀಧರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಪಟ್ಟಿಯಲ್ಲಿರುವ ಅಭ್ಯರ್ಥಿಗಳು ತಮ್ಮ ಮೂಲದಾಖಲೆಗಳ ಪರಿಶೀಲನೆಗಾಗಿ ಉಪ ನಿರ್ದೇಶಕರ ಕಚೇರಿಗೆ ಹಾಜರಾಗಬೇಕು. ಜೀವ ವಿಜ್ಞಾನ(ಕನ್ನಡ ಮಾಧ್ಯಮ) ವಿಷಯದವರು ಅಕ್ಟೋಬರ್ 06 ರ ಬೆಳಿಗ್ಗೆ 10 ಗಂಟೆಗೆ, ಗಣಿತ ಮತ್ತು ವಿಜ್ಞಾನ(ಉರ್ದು ಮಾಧ್ಯಮ) ವಿಷಯದವರು ಮಧ್ಯಾಹ್ನ 3 ಗಂಟೆಗೆ ಹಾಗೂ ಗಣಿತ ಮತ್ತು ವಿಜ್ಞಾನ(ಕನ್ನಡ ಮಾಧ್ಯಮ) ವಿಷಯದವರು ಅಕ್ಟೋಬರ್ 07 ಮತ್ತು 10 ರಂದು ಬೆಳಿಗ್ಗೆ 10 ಗಂಟೆಗೆ, ಅಕ್ಟೋಬರ್ 11, 12 ಮತ್ತು 13 ರಂದು ಸಮಾಜ ಪಾಠಗಳು (ಕನ್ನಡ ಮಾಧ್ಯಮ) ವಿಷಯದವರು ಬೆಳಿಗ್ಗೆ 10 ಗಂಟೆಗೆ ಹಾಗೂ ಅಕ್ಟೋಬರ್ 13 ರ ಮಧ್ಯಾಹ್ನ 3 ಗಂಟೆಗೆ ಸಮಾಜ ಪಾಠಗಳು (ಉರ್ದು ಮಾಧ್ಯಮ) ವಿಷಯಗಳು ಮತ್ತು ಭಾಷೆಗಳು ಆಂಗ್ಲ (ಇಂಗ್ಲೀಷ) ವಿಷಯದವರು ಅಕ್ಟೋಬರ್ 14ರ ಬೆಳಿಗ್ಗೆ 10 ಗಂಟೆಗೆ ತಮ್ಮ ಮೂಲದಾಖಲಾತಿಗಳೊಂದಿಗೆ ಪರಿಶೀಲನೆಗಾಗಿ ಹಾಜರಾಗಬೇಕು.
ತತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಪನಿರ್ದೇಶಕರ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 0836-2448250 ಹಾಗೂ 9448999339, 8150910211 ಗೆ ಸಂಪರ್ಕಿಸಬಹುದು ಎಂದು ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.