ಪೌರಿ : ಉತ್ತರಾಖಂಡದ ಪೌರಿಯಲ್ಲಿ ರಾತ್ರಿರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿ 500 ಮೀಟರ್ ಆಳದ ಕಮರಿಗೆ ಉರುಳಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹರಿದ್ವಾರದ ಲಾಲ್ ಧಾಂಗ್ ನಿಂದ ಕಾರಾ ತಲ್ಲಾಗೆ ತೆರಳುತ್ತಿದ್ದ 50 ಮಂದಿ ಬರಾತಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಸಿಮ್ರಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ 500 ಮೀಟರ್ ಆಳದ ಕಮರಿಗೆ ಉರುಳಿ ಬಿದ್ದಿದೆ. ರಾತ್ರಿ 8 ಗಂಟೆ ಸುಮಾರಿಗೆ ಬಿರೊಂಖಲ್ ನ ಸಿಎಂಡಿ ಬಳಿ ಅಪಘಾತ ಸಂಭವಿಸಿದೆ. ಇದರಲ್ಲಿ 25 ಜನರು ಸಾವನ್ನಪ್ಪಿದ್ದಾರೆ.
ವರದಿಗಳ ಪ್ರಕಾರ, ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದ ಬಗ್ಗೆ, ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಗಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್) ತಂಡಗಳನ್ನು ನಿಯೋಜಿಸಲಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಧುಮಕೋಟ್ನ ಬಿರೋಖಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದ ಪೌರಿ ಗರ್ವಾಲ್ ಬಸ್ ಅಪಘಾತದಲ್ಲಿ 25 ಜನರು ಸಾವನ್ನಪ್ಪಿದ್ದಾರೆ. ಪೊಲೀಸರು ಮತ್ತು ಎಸ್ಡಿಆರ್ಎಫ್ ರಾತ್ರೋರಾತ್ರಿ 21 ಜನರನ್ನು ರಕ್ಷಿಸಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
Uttarakhand | 25 people found dead in the Pauri Garwhal bus accident that took place last night in Birokhal area of Dhumakot. Police & SDRF rescued 21 people overnight; injured have been admitted to nearby hospitals: DGP Ashok Kumar
(File photo) pic.twitter.com/nFYkPA0nkn
— ANI UP/Uttarakhand (@ANINewsUP) October 5, 2022