ನವದೆಹಲಿ: ಸಿಬಿಐ ಮತ್ತು ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಪೊಲೀಸರು ಭಾರತದಾದ್ಯಂತ ಸುಮಾರು 105 ಸ್ಥಳಗಳಲ್ಲಿ ಶೋಧ ನಡೆಸಿದರು ಎನ್ನಲಾಗಿದೆ. ‘ಆಪರೇಷನ್ ಚಕ್ರ’ ಅಂತ ಇದಕ್ಕೆ ಹೆಸರು ಇಡಲಾಗಿದ್ದು, ಸೈಬರ್-ಸಕ್ರಿಯ ಹಣಕಾಸು ಅಪರಾಧಗಳನ್ನು ನಿಗ್ರಹಿಸುವತ್ತ ಗಮನ ಹರಿಸಿದೆ ಎನ್ನಲಾಗಿದೆ. ಬೃಹತ್ ಪ್ರಮಾಣದ ಡಿಜಿಟಲ್ ಪುರಾವೆಗಳು, 1.5 ಕೋಟಿ ರೂ ನಗದು ಮತ್ತು 1.5 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಅಂತ ತಿಳಿದು ಬಂದಿದೆ.
ಇಂಟರ್ಪೋಲ್, ಎಫ್ಬಿಐ ಮತ್ತು ಇತರ ದೇಶಗಳ ಪೊಲೀಸ್ ಪಡೆಗಳ ಮಾಹಿತಿಯ ಆಧಾರದ ಮೇಲೆ ಸೈಬರ್ ಅಪರಾಧಿಗಳ ವಿರುದ್ಧ ಸಿಬಿಐ ಕ್ರಮ ಕೈಗೊಂಡಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.