ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನಗಳಲ್ಲಿ ಜೀವನ ಶೈಲಿಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅಧಿಕ ಕೆಲಸದ ಒತ್ತಡದಿಂದ ಸರಿಯಾದ ಸಮಯಕ್ಕೆ ತಿಂಡಿ ಊಟ ತಿನ್ನುವುದಿಲ್ಲ. ಇದರಿಂದಲೂ ಸಹ ಗ್ಯಾಸ್ಟ್ರೀಕ್ ಆಗುತ್ತದೆ. ಹೀಗಾಗಿ ಅಧಿಕ ಬೊಜ್ಜು ಬರಲು ಶುರುವಾಗುತ್ತದೆ.
ವಿಜಯದಶಮಿಯ ಆಚರಣೆ ಯಾಕೆ ಮಾಡುತ್ತಾರೆ? ಅದರ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಅನಾರೋಗ್ಯಕಾರಿ ಆಹಾರ ಸೇವನೆಯ ಜೊತೆಗೆ ಕಟ್ಟ ಜೀವನಶೈಲಿಯನ್ನು ಅನುಸರಿಸುವುದರಿಂದ ತಮ್ಮ ಆರೋಗ್ಯಕ್ಕೆ ತಾವೇ ಕೆಟ್ಟದ್ದು ಮಾಡಿಕೊಳ್ಳುವುದರ ಜೊತೆಗೆ ದೇಹದ ತೂಕ ಜೊತೆಗೆ ಬೊಜ್ಜನ್ನು ಕೂಡ ಹೆಚ್ಚು ಮಾಡಿಕೊಂಡಿರುತ್ತಾರೆ. ಬನ್ನಿ ಇಂದಿನ ಲೇಖನದಲ್ಲಿ ಯಾವೆಲ್ಲಾ ಜ್ಯೂಸ್ ಗಳನ್ನು ಸೇವನೆ ಮಾಡಿದರೆ ದೇಹದ ಬೊಜ್ಜನ್ನು ನೈಸರ್ಗಿಕವಾಗಿ ಇಳಿಸಿಕೊಳ್ಳಬಹುದು ಎನ್ನುವುದನ್ನು ನೊಡೋಣ…
ಅನಾನಸ್ ಜ್ಯೂಸ್
ಬೇರೆ ಎಲ್ಲಾ ಹಣ್ಣುಗಳಂತೆ ಪೈನಾಪಲ್ ಅಥವಾ ಅನಾನಸ್ ಹಣ್ಣುಗಳು ಕೂಡ ತನ್ನಲ್ಲಿ ಅಪಾರ ಪ್ರಮಾಣ ದಲ್ಲಿ ನಮ್ಮ ಆರೋಗ್ಯಕ್ಕೆ ಅನುಕೂಲಕರವಾದ ಅಂಶಗಳನ್ನು ಒಳಗೊಂಡಿದೆ. ಇನ್ನು ಆರೋಗ್ಯ ತಜ್ಞರು ಹೇಳುವ ಹಾಗೆ ಅನಾನಸ್ ಹಣ್ಣಿನ ಜ್ಯೂಸ್ ನಲ್ಲಿ ಬ್ರೋಮೇಲೈನ್ ಎನ್ನುವ ನೈಸರ್ಗಿಕ ಅಂಶಗಳು ಕೂಡಿರುತ್ತದೆ
ವಿಜಯದಶಮಿಯ ಆಚರಣೆ ಯಾಕೆ ಮಾಡುತ್ತಾರೆ? ಅದರ ಮಹತ್ವವೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ದಾಳಿಂಬೆ ಹಣ್ಣಿನ ಜ್ಯೂಸ್
ಇದರಲ್ಲಿ ಪೌಷ್ಟಿಕಸತ್ವಗಳ ಜೊತೆಗೆ ಆಂಟಿ – ಆಕ್ಸಿಡೆಂಟ್ ಅಂಶಗಳು ಮತ್ತು ಪಾಲಿಫಿನಾಲ್ ಅಂಶಗಳು ಅಪಾರ ಪ್ರಮಾಣದಲ್ಲಿ ಕಂಡು ಬರುವುದರ ಜೊತೆಗೆ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಸಿಗುವುದರಿಂದ ದೇಹದ ತೂಕ ಇಳಿಸಲು ಸಹಾಯ ವಾಗುತ್ತದೆ.
ಎಲೆಕೋಸು ಜ್ಯೂಸ್
ಎಲೆಕೋಸು ಅಥವಾ ಕ್ಯಾಬೇಜ್ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯ ತರಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ತರಕಾರಿಯಲ್ಲಿ ಕಂಡು ಬರುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಸೌತೆಕಾಯಿ ಜ್ಯೂಸ್
ನಮಗೆಲ್ಲಾ ಗೊತ್ತೇ ಇರುವ ಹಾಗೆ ಈ ತರಕಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿನಾಂಶ ಇರುವುದರ ಜೊತೆಗೆ ತುಂಬಾನೇ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ.