ಕೆಎನ್ಎನ್ ಡಿಜಿಟಲ್ ಡೆಸ್ಕ್ : ಟೀ… ಚಹಾ… ಚಾಯ್… ಹೀಗೆ ಇದನ್ನು ನಾನಾ ಹೆಸರಿನಿಂದ ಕರೆಯಲಾಗುತ್ತದೆ. ಪ್ರಪಂಚದ ಹಲವು ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುವ ಚಹಾ ಎಂದರೆ ತುಂಬಾ ಜನರಿಗೆ ಇಷ್ಟ. ಬೆಳಿಗ್ಗೆ ಎದ್ದ ಕೂಡಲೇ, ಊಟ, ತಿಂಡಿ ತಿಂದ ಕೂಡಲೇ ಟೀ ಕುಡಿಯುವ ಅಭ್ಯಾಸ ತುಂಬಾ ಜನರಿಗುತ್ತದೆ. ಅದರಲ್ಲೂ ಕೆಲಸ ಮಾಡುವಾಗ ಆಗಾಗ ಟೀ ಕುಡಿಯುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀಗೆ ಕುಡಿಯೋದಕ್ಕೆ ಮುಂದಾಗುತ್ತಿದ್ದಾರೆ. ಆದರೆ ಗ್ರೀನ್ ಟೀ ಸೇವನೆಯಿಂದ ಆರೋಗ್ಯಕ್ಕೆ ಎಷ್ಟರಮಟ್ಟಿಗೆ ಲಾಭವಿದೆ ಅನ್ನೋದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ..
1 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿದರೆ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಹಾಗಾಗಿ ಆದಷ್ಟು ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯೋದನ್ನು ಕಡಿಮೆ ಮಾಡಿಕೊಳ್ಳಿ, ಬದಲಿಗೆ ಗ್ರೀನ್ ಟೀ ಗೊ ಒಂದೆರಡು ಬಿಸ್ಕೆಟ್ ಸೇವಿಸಿದರೆ ಒಳ್ಳೆಯದು
2. ದೇಹದ ತೂಕ ನಿಯಂತ್ರಣಕ್ಕೆ ಗ್ರೀನ್ ಟೀ ಸೇವಿಸುತ್ತಾರೆ ಆದರೆ ಆದಷ್ಟು ಬಿಸಿ ಇರೋ ಗ್ರೀನ್ ಟೀ ಸೇವಿಸಿದರೆ ಉತ್ತಮ ಆದರೆ ತಣ್ಣನೆಯ ಗ್ರೀನ್ ಟೀ ಅಷ್ಟು ಪರಿಣಾಮ ಬೀರುವುದಿಲ್ಲ
3 ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಗ್ರೀನ್ ಟೀ ಸೇವಿಸಿ ಮೂರು ಬಾರಿಗಿಂತ ಹೆಚ್ಚು ಗ್ರೀನ್ ಟೀ ಸೇವಿಸಿದರೆ ಪಿತ್ತ ಆಗುತ್ತದೆ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ ವಾಂತಿ ಅಲರ್ಜಿ ಅಂತ ಸಮಸ್ಯೆಗಳು ಕಾಣಿಸಿಕೊಳ್ಳಬಹುದು
4. ರಕ್ತದ ಕೊರತೆ ಇರುವವರು ಗ್ರೀನ್ ಟೀ ಸೇವಿಸಬಾರದು ಯಾಕೆ ಅಂದರೆ ಇದು ನಮ್ಮ ದೇಹದಲ್ಲಿರುವ ಕಬ್ಬಿಣದ ಅಂಶವನ್ನು ಹೀರಿಕೊಂಡು ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ
5. ರಾತ್ರಿ ಮಲಗುವ ಹೊತ್ತಿನಲ್ಲಿ ಗ್ರೀನ್ ಟಿ ಸೇವಿಸಲೇಬಾರದು ಗ್ರೀನ್ ಟೀ ಹಾಯಾದ ನಿದ್ದೆಗೆ ಅಡ್ಡಿ ಉಂಟುಮಾಡುತ್ತದೆ
6. ನೀರಿನಲ್ಲಿ ಚಹಾ ಎಲೆಗಳನ್ನು ಕುದಿಸಿ ಕುಡಿಯುವ ಬದಲು ಬಿಸಿನೀರಿಗೆ ಎಲೆಗಳನ್ನು ಹಾಕಿ ಒಂದು ನಿಮಿಷ ಬಿಟ್ಟು ಸೋಸಿ ಕುಡಿದರೆ ಉತ್ತಮ
7. ತಿಂಡಿ ಊಟ ತಿಂದ ತಕ್ಷಣ ಗ್ರೀನ್ ಟೀ ಕುಡಿಯಬೇಡಿ ಅದು ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ
8. ಗ್ರೀನ್ ಟೀ ಎಲ್ಲಿನ ಪಾಲಿ ಫಿನಾಲ್ಸ್ ನಿಂದ ಕೇವಲ ಹೊಟ್ಟೆಯ ಸುತ್ತಳತೆಯ ಬೊಜ್ಜು ಮಾತ್ರ ಕರಗಿಸುತ್ತದೆ
9 ತಿಂಗಳು ಹಳೆಯದಾದ ಟಿ ಬ್ಯಾಕ್ ಬೇಡವೇ ಬೇಡ ಹಳೆಯ ಗ್ರೀನ್ ಟೀ ಬ್ಯಾಗ್ ನಿಂದ ತಯಾರಿಸಿದ ಟೀ ಯಾವುದಕ್ಕೂ ಉಪಯೋಗವಿಲ್ಲ
10. ಗರ್ಭಿಣಿಯರು ಗ್ರೀನ್ ಟೀ ಸೇವಿಸಬಾರದು 11 ಗ್ರೀನ್ ಟೀ ಜೊತೆ ಸಕ್ಕರೆ ಬದಲು ಜೇನುತುಪ್ಪ ಬಳಸಿದರೆ ಉತ್ತಮ ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಗ್ರೀನ್ ಟೀ ಸೇವಿಸಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ