ನವದೆಹಲಿ: ವೆಬ್ಸೈಟ್ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆಯನ್ನು ಹೊರಡಿಸಿದೆ.
ಸ್ಯಾಟಲೈಟ್ ಟಿವಿ ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೋಮತ್ತು ಇತರ ಡಿಜಿಟಲ್ ಮಾಧ್ಯಮಗಳು ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡು ಜೂಜು ಮತ್ತು ಬೆಟ್ಟಿಂಗ್ ಕುರಿತಾಗಿ ಉತ್ತೇಜಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ದೇಶದಲ್ಲಿ ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ದಂಡ ಹಾಕಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ (Ministry of Information and Broadcasting) ಆದೇಶಿಸಿದೆ
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಬೆಟ್ಟಿಂಗ್ ಸೈಟ್ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್ಸೈಟ್ಗಳು, ಒಟಿಟಿ ಪ್ಲಾಟ್ಫಾರ್ಮ್ಗಳು ಮತ್ತು ಖಾಸಗಿ ಉಪಗ್ರಹ ಚಾನೆಲ್ಗಳಿಗೆ ಸೂಚನೆ. ಯಾವುದೇ ರೀತಿಯ ಬೆಟ್ಟಿಂಗ್ ಮತ್ತು ಜೂಜಿನ ಕುರಿತಾಗಿ ಉತ್ತೇಜಿಸುವ ಜಾಹೀರಾತನ್ನು ಪ್ರಸಾರ ಮಾಡಬೇಡಿ. ಈ ಸೂಚನೆಯನ್ನು ಉಲ್ಲಂಘಿಸಿದರೆ ಅದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
📢 Ministry of Information and Broadcasting issues 'Advisory on Advertisement of Online Betting Platforms' to Private Satellite TV Channels.
➡️ For more details👇 pic.twitter.com/QlaUAhykho
— Ministry of Information and Broadcasting (@MIB_India) October 3, 2022
ಈಗಾಗಲೇ ಡಿಜಿಟಲ್ ಮಾಧ್ಯಮ ಮತ್ತು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಈ ರೀತಿಯ ಬೆಟ್ಟಿಂಗ್ ಜಾಹೀರಾತುಗಳು ಪ್ರಸಾರ ಆಗುತ್ತಿರುವುದು ಹೆಚ್ಚಾಗಿದೆ. ಹಾಗಾಗಿ ಇಂತಹ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕಾಗಿದೆ. ಇನ್ಮುಂದೆ ಬೆಟ್ಟಿಂಗ್ ಜಾಹೀರಾತುಗಳಿಗೆ ಸಂಬಂಧಿಸಿದ ಯಾವುದೇ ರೀತಿ ಮಾಹಿತಿಯನ್ನು ಪ್ರಸಾರ ಮಾಡದಂತೆ ಸರ್ಕಾರ ಸೂಚಿಸಿದೆ.