ಮಂಗಳೂರು : ಇದು ಕರಾವಳಿ ಜನತೆಗೆ ಸಿಹಿ ಸುದ್ದಿಯಾಗಿದ್ದು, ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ ಎಂದೇ ಕರೆಯಲಾಗುತ್ತದೆ. ಇದೀಗ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಈ ಋತುವಿನ ಕಂಬಳದ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಕಂಬಳದ ವಿಶೇಷತೆ ಏನು ?
ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ.
ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯವಾಗಿದೆ
ಮಂಗಳೂರು ಜಿಲ್ಲಾ ಕಂಬಳ ಸಮಿತಿಯ ಸಭೆಯು ರವಿವಾರ ಮೂಡುಬಿದಿರೆಯಲ್ಲಿ ಸಮಿತಿಯ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಂಬಳದ ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 5ರಂದು ಶಿರ್ವ ಕಂಬಳದೊಂದಿಗೆ ಕಂಬಳ ಋತು ಪ್ರಾರಂಭಗೊಳ್ಳಲಿದ್ದು, ಎಪ್ರಿಲ್ 8ರ ವರೆಗೆ ಒಟ್ಟು 24 ಕಂಬಳಗಳು ನಡೆಯಲಿವೆ. ಈ ಬಾರಿ ಪಣಪಿಲದಲ್ಲಿ ಹೊಸದಾಗಿ ಕಂಬಳ ಆಯೋಜನೆಗೊಳ್ಳುತ್ತಿದೆ.
ಮಂಗಳೂರು ಪಿಲಿಕುಳದ ಕಂಬಳಕ್ಕೂ ನ. 12ರಂದು ದಿನಾಂಕ ನೀಡಲಾಗಿದ್ದು ಜಿಲ್ಲಾಡಳಿತ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಪಿಲಿಕುಳದಲ್ಲಿ ಕೆಲವು ವರ್ಷಗಳಿಂದ ಕಂಬಳ ಸ್ಥಗಿತಗೊಂಡಿದ್ದು ಈ ಬಾರಿ ಆಯೋಜಿಸಲು ಜಿಲ್ಲಾಡಳಿತ ಉತ್ಸುಕತೆ ತೋರ್ಪಡಿಸಿದೆ ಎನ್ನಲಾಗಿದೆ.
ಕೊರೊನಾ ಸಮಸ್ಯೆಯಿಂದಾಗಿ ಕಳೆದ ಬಾರಿಯ ಕಂಬಳ ಋತು ಡಿ. 5 ರಿಂದ ಆರಂಭಗೊಂಡಿತ್ತು ಮತ್ತು ಒಟ್ಟು 18 ಕಂಬಳಗಳ ದಿನಾಂಕಗಳನ್ನು ಕಂಬಳ ಸಮಿತಿ ಪ್ರಕಟಿಸಿತ್ತು. 5 ಕಂಬಳ ಪೂರ್ಣಗೊಳ್ಳುವಷ್ಟರಲ್ಲಿ ವಾರಾಂತ್ಯ ಕರ್ಫ್ಯೂ, ಕೊರೊನಾ ನಿರ್ಬಂಧ ಜಾರಿಗೊಂಡ ಹಿನ್ನೆಲೆಯಲ್ಲಿ ಉಳಿದ 11 ಕಂಬಳಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಬಳಿಕ ಫೆಬ್ರವರಿಯಲ್ಲಿ ವಾರಾಂತ್ಯ ಕರ್ಫ್ಯೂ ತೆರವುಗೊಂಡ ಬಳಿಕ ಮರು ಆರಂಭಗೊಂಡು ಎಪ್ರಿಲ್ನಲ್ಲಿ ಕೊನೆಗೊಂಡಿತ್ತು. ಈ ಬಾರಿ ಹಿಂದಿನಂತೆ ನಿಗದಿತ ಸಮಯಕ್ಕೆ ಆರಂಭಗೊಳ್ಳುತ್ತಿದೆ.
ಕಂಬಳ ವೇಳಾಪಟ್ಟಿ