ನವದೆಹಲಿ: ಅಳಿದುಹೋದ ಹೋಮಿನಿನ್ ಗಳ ಜೀನೋಮ್ ಗಳು ಮತ್ತು ಮಾನವ ವಿಕಸನದ ಜಿನೋಮ್ ಗಳಿಗೆ ಸಂಬಂಧಿಸಿದ ಅವರ ಆವಿಷ್ಕಾರಗಳಿಗಾಗಿ ಸ್ವಾಂಟೆ ಪಾಬೊ ( Svante Pääbo ) ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ( Physiology or Medicine Nobel Prize ) ನೀಡಲಾಗಿದೆ.
Nobel Prize in Physiology or Medicine has been awarded to Svante Pääbo “for his discoveries concerning the genomes of extinct hominins and human evolution.” pic.twitter.com/KHUHwNjjof
— ANI (@ANI) October 3, 2022
ವೈದ್ಯಕೀಯ ಪ್ರಶಸ್ತಿಯ ಘೋಷಣೆಯೊಂದಿಗೆ ನೊಬೆಲ್ ಪ್ರಶಸ್ತಿಯ ಋತುವು ಪ್ರಾರಂಭವಾಗಿದೆ. ಇದು ಸೋಮವಾರ ವೈದ್ಯಕೀಯ ಪ್ರಶಸ್ತಿಯೊಂದಿಗೆ ಪ್ರಾರಂಭವಾಗಿದ್ದು, ಮಂಗಳವಾರ ಭೌತಶಾಸ್ತ್ರ, ಬುಧವಾರ ರಸಾಯನಶಾಸ್ತ್ರ ಮತ್ತು ಗುರುವಾರ ಸಾಹಿತ್ಯದೊಂದಿಗೆ ನಡೆಯಲಿದೆ.
2022 ರ ನೊಬೆಲ್ ಶಾಂತಿ ಪ್ರಶಸ್ತಿಯ ಘೋಷಣೆ ಶುಕ್ರವಾರ ನಿಗದಿಯಾಗಿದೆ. ಅಕ್ಟೋಬರ್ 1೦ ರಂದು ಅರ್ಥಶಾಸ್ತ್ರ ಪ್ರಶಸ್ತಿಯನ್ನು ಘೋಷಿಸಲಾಗುವುದು.