ಬೆಂಗಳೂರು: ಪಾಸ್ ಪೋರ್ಟ್ ಗಾಗಿ ( Passport ) ಅರ್ಜಿ ಸಲ್ಲಿಸಿ, ಪೊಲೀಸ್ ವೆರಿಫಿಕೇಷನ್ ಗಾಗಿ ( Police Verification ) ಕಾಯುತ್ತಿರುವಂತ ಜನತೆಗೆ, ಜಿಡಿಪಿ ಕರ್ನಾಟಕ ( DGP Karnataka) ಗುಡ್ ನ್ಯೂಸ್ ನೀಡಿದ್ದಾರೆ. ಇನ್ಮುಂದೆ 21 ದಿನಗಳಲ್ಲಿ ಪೊಲೀಸ್ ವೆರಿಫಿಕೇಷನ್ ಪೂರ್ಣಗೊಳಿಸೋದಾಗಿ ತಿಳಿಸಿದ್ದಾರೆ.
BREAKING NEWS : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ : ಜೆಡಿಎಸ್ ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ
ಈ ಕುರಿತಂತೆ ಟ್ವಿಟ್ ಮಾಡಿರುವಂತ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಅವರು, ನಾವು ಪ್ರತಿ ಪೊಲೀಸ್ ಪರಿಶೀಲನೆಯನ್ನು 21 ದಿನಗಳಲ್ಲಿ ಪೂರ್ಣಗೊಳಿಸುವ ಭರವಸೆ ನೀಡುತ್ತೇವೆ (ಪಾಸ್ಪೋರ್ಟ್ ಪೊಲೀಸ್ ಪರಿಶೀಲನೆಗಾಗಿ ನಾವು ಕಾನೂನು ತೊಡಕುಗಳನ್ನು ಹೊರತುಪಡಿಸಿ ಸುಮಾರು 7 ದಿನಗಳನ್ನು ತೆಗೆದುಕೊಳ್ಳುತ್ತೇವೆ) ಎಂದಿದ್ದಾರೆ.
ಈಗ ಅಚ್ಛೇದಿನದ ಅಸಲಿಯೆತ್ತಿನ ಬಗ್ಗೆ ದೊಡ್ಡ ಪ್ರಶ್ನೆಯೇ ಮೂಡಿದೆ – HD ಕುಮಾರಸ್ವಾಮಿ
ಇನ್ನೂ ನೀವು 21 ದಿನಗಳ ಒಳಗೆ ಉತ್ತರವನ್ನು ಸ್ವೀಕರಿಸದಿದ್ದರೆ ನೀವು ಎಸ್ಪಿ / ಸಿಪಿಯನ್ನು ಭೌತಿಕವಾಗಿ ಭೇಟಿಯಾಗುವ ಹಕ್ಕನ್ನು ಹೊಂದಿದ್ದೀರಿ. ಇಲ್ಲದಿದ್ದರೆ ನಮ್ಮ ಪ್ರಕ್ರಿಯೆಗಳು 100% ಆನ್ ಲೈನ್ ನಲ್ಲಿವೆ ಎಂಬುದಾಗಿ ತಿಳಿಸಿದ್ದಾರೆ.
We promise to complete every police verification within 21 days (for passport police verifications we take about 7 days unless legal complications). If you dont receive a reply within 21 days you have a right to meet SP/ CP physically. Our processes are 100% online otherwise.
— DGP KARNATAKA (@DgpKarnataka) October 3, 2022