ಬೆಂಗಳೂರು: ಬೆಂಗಳೂರಿನಲ್ಲಿ ಬುಲ್ಡೋಜರ್ ಘರ್ಜನೆ ಸ್ಥಗಿತಗೊಂಡಿತ್ತು. ಇದೀಗ ದಸರಾ ನಂತರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚಾರಣೆ ನಡೆಯಲಿದೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
BIGG NEWS: ಕೊಪ್ಪಳದಲ್ಲಿ ಅಮೃತ ಸರೋವರ ಯೋಜನೆಯಲ್ಲಿ ಕೆರೆ ಅಭಿವೃದ್ಧಿ; ನಿರ್ಮಾಣವಾಗಿ 45 ದಿನಗಳಲ್ಲಿ ತಡೆಗೋಡೆ ಕುಸಿತ
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೊಡ್ಡವರಿಂದಲೇ ಆರಂಭಿಸಲು ಇಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಕೆಲವರು ಕೇವಿಯೇಟ್ ಹೋಗಿದ್ದಾರೆ. ಆದ್ರೂ ಕೂಡ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಇನ್ನು ನಗರದಲ್ಲಿ ಭಾರಿ ಮಳೆಗೆ ರಸ್ತೆ ಮತ್ತು ನಿವಾಸಗಳಿಗೆ ನೀರು ನುಗ್ಗಿ ಅವಾಂತರಗೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿತ್ತು. ಕೆಲ ದಿನಗಳಿಂದ ನಗರದಲ್ಲಿ ಜೆಸಿಬಿ ಘರ್ಜಿಸಿತ್ತು.
BIGG NEWS: ಕೊಪ್ಪಳದಲ್ಲಿ ಅಮೃತ ಸರೋವರ ಯೋಜನೆಯಲ್ಲಿ ಕೆರೆ ಅಭಿವೃದ್ಧಿ; ನಿರ್ಮಾಣವಾಗಿ 45 ದಿನಗಳಲ್ಲಿ ತಡೆಗೋಡೆ ಕುಸಿತ
ಇನ್ನು ಒತ್ತುವರಿ ಕಾರ್ಯಾಚರಣೆ ಬಡ ಮತ್ತು ಮಧ್ಯಮ ವರ್ದವರಿಗೆ ಮಾತ್ರ ಸೀಮೀತವಾಗಿತ್ತಾ? ಎಂಬ ಪ್ರಶ್ನೆ ಮೂಡಿಬಂದಿತ್ತು. ಈ ನಡುವೆಯೇ ಹೈಕೋರ್ಟ್ ಒತ್ತುವರಿ ಕಾರ್ಯಾಚರಣೆ ವಿಳಂಬವಾಗುತ್ತಿರುವುದಕ್ಕೆ ಚಾಟಿ ಬೀಸಿದೆ. ಹೀಗಾಗಿ ಅಕ್ಟೋಬರ್ 25 ರೊಳಗೆ ಬಾಕಿ ಉಳಿದ ಒತ್ತುವರಿ ತೆರವು ಮಾಡಿ ಎಂದು ಬಿಬಿಎಂಪಿಗೆ ತಾಕೀತು ಮಾಡಿದೆ.