ನವದೆಹಲಿ : ಸಾಲಗಾರರಿಗೆ ಆರ್ ಬಿಐ ಬಿಗ್ ಶಾಕ್ ನೀಡಿದ್ದು, ಎರಡು ದಿನಗಳ ಹಿಂದಯಷ್ಟೇ ಆರ್ ಬಿಐ ರೆಪೋ ದರ ಹೆಚ್ಚಿಸಿದ ಪರಿಣಾಮ ಸಾಲದ ಕಂತುಗಳ ಮೊತ್ತ ಹೆಚ್ಚಾಗಿದ್ದು, ಡಿಸೆಂಬರ್ ನಲ್ಲಿ ಮತ್ತೆ ರೆಪೊ ದರ 35 ಮೂಲಾಂಶ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಸ್ ಬಿಐ ವರದಿ ಹೇಳಿದೆ.
ಮೇ ತಿಂಗಳಿನಿಂದ ರೆಪೊ ದರ 5 ಬಾರಿ ಪರಿಷ್ಕರಣೆ ಆಗಿರುವ ಕಾರಣ ಪ್ರಸಕ್ತ ಆರ್ಥಿಕ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಹೊಸ ಯೋಜನೆಗಳ ಘೋಷಣೆ ಕಡಿಮೆ ಆಗಿತ್ತು. 2021-22 ನೇ ಸಾಲಿನ ಕಡೆಯ ತ್ರೈಮಾಸಿಕದಲ್ಲಿ 5.75 ಲಕ್ಷ ಕೋಟಿ ರೂ. ಮೊತ್ತದ ಯೋಜನೆಗಳು ನಡೆದಿದ್ದವು. ಆದರೆ ಈಗ 4.35 ಲಕ್ಷ ಕೋಟಿ ರೂ. ಯೋಜನೆಗಳು ಮಾತ್ರ ಚಾಲ್ತಿಯಲ್ಲಿವೆ. ಈಕಾರಣದಿಂದ ಮತ್ತೆ ಸಾಲದ ಕಂತುಗಳ ಮೊತ್ತ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
BIGG NEWS : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ. 5 ರಂದು ರಾಜ್ಯ ‘ಹೆದ್ದಾರಿ ಬಂದ್’ ಗೆ ರೈತ ಸಂಘಟನೆ ಕರೆ
ರೆಪೊ ದರ ಡಿಸೆಂಬರ್ ನಲ್ಲಿ 35 ಮೂಲಾಂಶ ಹೆಚ್ಚಳವಾಗುವ ಸಾಧ್ಯತೆ ಇದ್ದು, ಸಾಲದ ಮೇಲಿನ ಬಡ್ಡಿ ದರ 50 ಮೂಲಾಂಶ ಹೆಚ್ಚಳ ಪರಿಣಾಮ ಪ್ರಸ್ತುತ ರೆಪೊ ದರ ಶೇ. 5.90 ಕ್ಕೆ ಏರಿಕೆಯಾಗಿದೆ.