ಹತ್ರಾಸ್: ಶಾಲಾ ಶಿಕ್ಷಕನೋರ್ವ ಕುಡಿದ ಅಮಲಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದಂತಹ ಘಟನೆ ಉತ್ತರಪ್ರದೇಶದ ಹತ್ರಾಸ್ ನಗರವೊಂದರ ಶಾಲೆಯಲ್ಲಿ ನಡೆದಿದೆ. ಘಟನೆ ಕುರಿತಂತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಸಂಬಂದ ವ್ಯಕ್ತಿಗಳ ಗುಂಪೊಂದು ವಿಡಿಯೋ ಚಿತ್ರಿಕರಿಸಿದ್ದು, ಶಿಕ್ಷಕನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಮುಂದೆ ಕುಡಿದು ಬರುತ್ತಿದ್ದ ಶಿಕ್ಷಕನನ್ನು ಹಿಡಿದು ವ್ಯಕ್ತಿಗಳ ಗುಂಪು ಈ ಘಟನೆಯನ್ನು ಚಿತ್ರೀಕರಿಸಿದೆ. ಇಷ್ಟೆಲ್ಲಾ ನಡೆದರು ಶಿಕ್ಷಕ ಮಾತ್ರ ತನ್ನನ್ನು ತಾನು ಸಮರ್ಥಿಸಿಕೊಂಡಿದ್ಸಾನೆ. ಇದರ ಜೊತೆಗೆ ತರಗತಿಯಲ್ಲಿಯೇ ಬಿಯರ್ ಡಬ್ಬವನ್ನು ಬಚ್ಚಿಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಪೊಲೀಸರನ್ನು ಒತ್ತಾಯಿಸಿದ್ದಾರೆ. ಮಕ್ಕಳ ಭವಿಷ್ಯದ ಸೃಷ್ಟಿಕರ್ತರಾದ ಶಿಕ್ಷಕರೇ ಇಂತಹ ಕೆಲಸ ಮಾಡಿದರೆ ಮಕ್ಕಳ ಭವಿಷ್ಯ ಚೆನ್ನಾಗಿರಬಹುದು? ಇಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
नशे की हालत में धुत मास्टर जी बच्चे बच्चियों को पढ़ा रहे हैं। वीडियो हाथरस यूपी की बताई जा रही है। यदि बच्चों के भविष्य के सृजनहार टीचर ऐसी हरकत करें तो क्या बच्चों का भविष्य अच्छा हो सकता है? तुरंत इस टीचर पे कार्यवाही करे @Uppolice pic.twitter.com/zbCoJb5D8e
— Swati Maliwal (@SwatiJaiHind) October 2, 2022