ಬೆಳಗಾವಿ: ವಯೋ ವೃದ್ದೆಯೊಬ್ಬರು ಬೆಡ್ ಮೇಲೆ ಮಲಗಿಕೊಂಡೇ ಸಬ್ರಿಜಿಸ್ಟ್ರಾರ್ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ಘಟನೆ ಬೆಳಗಾವಿ ದಕ್ಷಿಣ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದಿದೆ.
ಹಿರೇಬಾಗೆವಾಡಿ ಗ್ರಾಮದಲ್ಲಿ ಮಹಾದೇವಿ ಹೆಸರಿನಲ್ಲಿ 2 ಎಕರೆ 35 ಗುಂಟೆ ಜಮೀನಿದ್ದು, ಆ ಜಮೀನನ್ನು ಮಕ್ಕಳಾದ ವಿದ್ಯಾ ಹೊಸಮನಿ(54) ಹಾಗೂ ರವೀಂದ್ರ ಗುರಪ್ಪ ಹೊಸಮನಿ(51) ಎಂಬುವರಿಗೆ ಹಕ್ಕುಬಿಟ್ಟು ಕೊಡಲು ಅರ್ಜಿ ಸಲ್ಲಿಸಿದ್ದರು ಎನ್ನಲಾಗಿದೆ. ನ್ಯೂಮೋನಿಯಾ ಕಾಯಿಲೆಗೆ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಹಾದೇವಿ ಅಗಸಿಮನಿ ಆಸ್ತಿ ವರ್ಗಾವಣೆ ಮತ್ತು ಆಸ್ತಿ ಹಕ್ಕು ಪತ್ರಕ್ಕೆ ಸಹಿ ಸಹಿ ಮತ್ತು ಬೆರಳಚ್ಚು ತೆಗೆದುಕೊಂಡು ಹೋಗಲು ಕುಟುಂಬ ಸದಸ್ಯರು ಉಪನೋಂದಾಣಾಧಿಕಾರಿ ಕಚೇರಿ ಆಗಮಿಸಿದ ಘಟನೆ ನಡೆದಿದೆ.