ಬೆಂಗಳೂರು : ‘ಭಾರತ್ ಜೋಡೋ’ ಯಾತ್ರೆ ವಿಚಾರ ರಾಜ್ಯ ರಾಜಕಾರಣದಲ್ಲಿ ವಾದ, ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಹೌದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪತ್ಯಾರೋಪಗಳು ನಡೆಯುತ್ತಿದೆ. ಇದೀಗ ಭಾರತ್ ಜೋಡೋ ಯಾತ್ರೆ ವೇಳೆ ಕರ್ನಾಟಕದ ಧ್ವಜದಲ್ಲಿ ರಾಹುಲ್ ಗಾಂಧಿ ಫೋಟೋ ಬಳಸಿರುವ ವಿಚಾರಕ್ಕೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.
ಭಾರತ್ ಜೋಡೋ ಯಾತ್ರೆ ವೇಳೆ ಕನ್ನಡದ ಬಾವುಟದಲ್ಲಿ ರಾಹುಲ್ ಗಾಂಧಿಯ ಫೋಟೋ ಅಂಟಿಸಲಾಗಿತ್ತು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಬಿಜೆಪಿ ಧ್ವಜಕ್ಕೆ ಕಾಂಗ್ರೆಸ್ ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಿಮ್ಮ ರಾಜಕೀಯದ ಆಟಕ್ಕಾಗಿ ಕರ್ನಾಟಕದ ಹೆಸರು ಬಳಸಬೇಡಿ. ನಿಮ್ಮ ಜಾತ್ರೆಗಳ ನೆಪದಲ್ಲಿ ಕರ್ನಾಟಕವನ್ನು ಭ್ರಷ್ಟರಾಜ್ಯ ಎನ್ನುತ್ತಿದ್ದೀರಿ, ನಿಮ್ಮ ತೆವಲುಗಳಿಗೆ ರಾಜ್ಯದ ಹೆಸರು ಬಳಸಬೇಡಿ , ಕರುನಾಡಿನ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟರ್ ಗಳನ್ನು ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಬಿಟ್ಟಿದೆ.