ಕಾರವಾರ : ಗೋವಾಕ್ಕೆ ಅಕ್ರಮವಾಗಿ ಗೋ ಮಾಂಸ ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಮಾಲು ಸಮೇತ ಹಿಡಿದು ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅನಮೋಡ ಚೆಕ್ ಪೋಸ್ಟ್ ಬಳಿ ಜಪ್ತಿ ಮಾಡಲಾಗಿದ್ದು, ಮಹೇಂದ್ರ ಪಿಕಪ್ ಸಮೇತ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಅಳ್ನಾವರ್ ಮೂಲದ ಸಾದಿಕ್, ಇಲಿಯಾಸ್, ದಾವಲಮಲೀಕ್, ಖಾನಾಪುರ ಮೂಲ ಶಾಹಿದ್ ಹಾಗೂ ರಾಜಾಸಾಬ್ದ ಎಂದು ಗುರುತಿಸಲಾಗಿದೆ. ಆರೋಪಿಗಳು 3,10,800 ರೂ ಮೌಲ್ಯದ 2,220 ಕೆಜಿ ಗೋಮಾಂಸ ಸಾಗಿಸುತ್ತಿದ್ದರು. ಈ ಸಂಬಂಧ ಜೋಯಿಡಾ ತಾಲೂಕಿನ ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.