ಮೈಸೂರು : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ಯಾತ್ರಾ (Bharat Jodo Yatra) 3ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ನಾಳೆ ಕರ್ನಾಟಕಕ್ಕೆ ಸೋನಿಯಾಗಾಂಧಿ ಭೇಟಿ ನೀಡಲಿದ್ದಾರೆ.
ಹೌದು, ಮೈಸೂರಿಗೆ ಆಗಮಿಸುತ್ತಿರುವ ಸೋನಿಯಾ ಗಾಂಧಿ ಅವರು ವಸ್ತು ಪ್ರದರ್ಶನಾ ಮೈದಾನದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಬಳಿಕ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಳೆ ಮೈಸೂರು ನಗರದಿಂದ TS ಛತ್ರದವರೆಗೂ ಸಾಗಲಿರುವ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ಗೆ ಮತ್ತಷ್ಟು ಹುರುಪು ಸಿಕ್ಕಂತಾಗಿದೆ. ಮೈಸೂರಿನ ಬದನವಾಳು ಗ್ರಾಮದಲ್ಲಿರುವ ರಾಹುಲ್ ಗಾಂಧಿ ಬೆಳಗ್ಗೆ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಖಾದಿ ಗ್ರಾಮೋದ್ಯೋಗದ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆಯರ ಜೊತೆ ಸಂವಾದ ನಡೆಸಿದರು.
BIGG NEW : ‘ಇಂಡಿಗೋ ವಿಮಾನ’ಕ್ಕೆ ಬಾಂಬ್ ಬೆದರಿಕೆ : ಮುಂಬೈ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ | Mumbai airport
ಪಂಜಾಬ್ ನಲ್ಲಿ ಹಾವೇರಿ ಮೂಲದ ಯೋಧ ಹುತಾತ್ಮ : ಟ್ವೀಟ್ ಮೂಲಕ ಸಿಎಂ ಬೊಮ್ಮಾಯಿ ಸಂತಾಪ