ನವದೆಹಲಿ : ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿ(Mahatma Gandhi) ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ(Lal Bahadur Shastri) ಅವರ ಜನ್ಮದಿನ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರುಗಳಿಗೆ ನಮನ ಸಲ್ಲಿಸಿದ್ದಾರೆ.
ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನಾಚರಣೆಯ ಅಂಗವಾಗಿ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧೀಜಿಗೆ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು
“ಈ ಗಾಂಧಿ ಜಯಂತಿಯು ಇನ್ನೂ ಹೆಚ್ಚು ವಿಶೇಷವಾಗಿದೆ. ಏಕೆಂದರೆ, ಭಾರತವು ಆಜಾದಿ ಕಾ ಅಮೃತ ಮಹೋತ್ಸವವನ್ನು ಗುರುತಿಸುತ್ತದೆ. ಗಾಂಧೀಜಿಯ ಗೌರವಾರ್ಥವಾಗಿ ಯಾವಾಗಲೂ ಬಾಪು ಅವರ ಆದರ್ಶಗಳನ್ನು ಅನುಸರಿಸಿ. ಖಾದಿ ಮತ್ತು ಕರಕುಶಲ ವಸ್ತುಗಳನ್ನು ಖರೀದಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದಿದ್ದಾರೆ.
#WATCH | Delhi: PM Narendra Modi pays tribute to Mahatma Gandhi at Rajghat on #GandhiJayanti
(Source: DD) pic.twitter.com/HUZyZKzjJM
— ANI (@ANI) October 2, 2022
Paying homage to Mahatma Gandhi on #GandhiJayanti. This Gandhi Jayanti is even more special because India is marking Azadi Ka Amrit Mahotsav. May be always live up to Bapu’s ideals. I also urge you all to purchase Khadi and handicrafts products as a tribute to Gandhi Ji. pic.twitter.com/5icVnnRwwd
— Narendra Modi (@narendramodi) October 2, 2022
“ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಅವರ ಸರಳತೆ ಮತ್ತು ನಿರ್ಣಾಯಕತೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರ ಕಠಿಣ ನಾಯಕತ್ವವು ಯಾವಾಗಲೂ ಸ್ಮರಣೀಯವಾಗಿದೆ. ಅವರ ಜನ್ಮ ದಿನಕ್ಕೆ ನನ್ನ ನಮನಗಳು” ಎಂದಿದ್ದಾರೆ.
Today, on Shastri Ji’s Jayanti I am also sharing some glimpses from his gallery in the Pradhanmantri Sangrahalaya in Delhi, which showcases his life journey and accomplishments as PM. Do visit the Museum… pic.twitter.com/09yi9FWQSs
— Narendra Modi (@narendramodi) October 2, 2022
“ಇಂದು, ಶಾಸ್ತ್ರಿ ಜೀ ಅವರ ಜಯಂತಿಯಂದು ನಾನು ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿರುವ ಅವರ ಗ್ಯಾಲರಿಯ ಕೆಲವು ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ಪ್ರಧಾನಿಯಾಗಿ ಅವರ ಜೀವನ ಪಯಣ ಮತ್ತು ಸಾಧನೆಗಳನ್ನು ಪ್ರದರ್ಶಿಸುತ್ತದೆ. ಮ್ಯೂಸಿಯಂಗೆ ಎಲ್ಲರೂ ಒಮ್ಮೆ ಭೇಟಿ ನೀಡಿ” ಎಂದು ಮನವಿ ಮಾಡಿದ್ದಾರೆ.