ವಡೋದರಾ(ಗುಜರಾತ್): ಭಾರತ ಹಾಗೂ ನೆರೆಯ ರಾಷ್ಟ್ರ ಎರಡೂ ʻಐಟಿʼಯಲ್ಲಿ ಅಭಿವೃದ್ಧಿ ಸಾಧಿಸಿವೆ. ಭಾರತ ಮಾಹಿತಿ ತಂತ್ರಜ್ಞಾನ(ಐಟಿ)ಯಲ್ಲಿ ಪರಿಣಿತಿ ಹೊಂದುತ್ತಿದ್ದರೆ, ನೆರೆಯ ರಾಷ್ಟ್ರ ಅಂತರರಾಷ್ಟ್ರೀಯ ಟೆರರಿಸಂ(ಐಟಿ)ಯಲ್ಲಿ ಪರಿಣಿತರು ಎಂದು ʻಪಾಕಿಸ್ತಾನʼವನ್ನು ಉಲ್ಲೇಖಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್(Foreign Minister S Jaishanka) ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ನ ವಡೋದರಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಜೈಶಂಕರ್, ಪಾಕಿಸ್ತಾನ ಮಾಡಿದಂತೆ ಬೇರಾವ ದೇಶವೂ ಭಯೋತ್ಪಾದನೆ ನಡೆಸಿಲ್ಲ. ಭಾರತವು ಮಾಹಿತಿ ತಂತ್ರಜ್ಞಾನ(ಐಟಿ)ಯಲ್ಲಿ ಪರಿಣಿತಿ ಹೊಂದುತ್ತಿದ್ದರೆ, ನೆರೆಯ ರಾಷ್ಟ್ರ ಅಂತರರಾಷ್ಟ್ರೀಯ ಟೆರರಿಸಂ(ಐಟಿ)ಯಲ್ಲಿ ಪರಿಣಿತರಾಗಿದ್ದಾರೆ. ಇದ್ರಿಂದ ದೇಶವು ಹಿನ್ನಡೆ ಅನುಭವಿಸುತ್ತದೆಯೇ ಹೊರತು ಅಭಿವೃದ್ಧಿ ಹೊದಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
#WATCH | We’ve a neighbour, like we’re expert in IT (information technology) they’re expert in ‘international terrorists’. It’s going on for years…but we could explain to world that terrorism is terrorism, today it’s being done against us, tomorrow it will be against you…:EAM pic.twitter.com/zxuibuadjG
— ANI (@ANI) October 1, 2022
ನರೇಂದ್ರ ಮೋದಿ ನೇತೃತ್ವದ ಸರ್ಕಾರದ ರಾಜತಾಂತ್ರಿಕತೆಯು ಇತರ ದೇಶಗಳು ಭಯೋತ್ಪಾದನೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಭಾರತವು ವಿಶ್ವವನ್ನು ಕೊಂಡೊಯ್ಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ರೈಲ್ವೆ ನಿಲ್ದಾಣದಲ್ಲೇ ಇದ್ದಕ್ಕಿದ್ದಂತೆ ಹೃದಯಾಘಾತ: ಪತಿಯ ಬಾಯಿಗೆ ಉಸಿರು ತುಂಬಿ ಮರು ಜೀವ ನೀಡಿದ ಪತ್ನಿ!
BIGG NEWS : ಪಾಲಿಟೆಕ್ನಿಕ್ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ
BIGG NEWS : ಕೊಪ್ಪಳ ಜಿಲ್ಲೆಯಲ್ಲಿ ಘೋರ ದುರಂತ : ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು!