ಚಿಲಿ: ಶುಕ್ರವಾರ ಚಿಲಿಯ ಕ್ಲಬ್ ಕೊಲೊ ಕೊಲೊ ಆಯೋಜಿಸಿದ ಮುಕ್ತ ತರಬೇತಿ ಅವಧಿಯಲ್ಲಿ ಸ್ಯಾಂಟಿಯಾಗೊದ ಎಸ್ಟಾಡಿಯೊ ಮೆಮೋರಿಯಲ್ ಕ್ರೀಡಾಂಗಣದಲ್ಲಿ ಛಾವಣಿಯ ಒಂದು ಭಾಗ ಅಭಿಮಾನಿಗಳ ಮೇಲೆ ಬಿದ್ದಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋಲ್ಲಿ, ಸಂಭ್ರಮಿಸುತ್ತಿರುವ ಅಭಿಮಾನಿಗಳ ಮೇಲೆ ಛಾವಣಿಯ ಒಂದು ಭಾಗ ಭಿದ್ದಿದೆ. ಈ ವೇಳೆ ಅಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡುವುದನ್ನು ನೋಡಬಹುದು.
El sobrino de una compañera de pega, fue al arengazo de colo colo y se sacó la ctmre.🤦🏻♀️ pic.twitter.com/35qda0OECV
— Magenta ✨💜💚 🌳 (@magenta_RH) September 30, 2022
ದೃಶ್ಯಾವಳಿಯಲ್ಲಿ, ಎರಡು ಜಾಹೀರಾತು ಹೋರ್ಡಿಂಗ್ಗಳು ಕುಸಿದಿವೆ ಮತ್ತು ಜನರು ಹೋರ್ಡಿಂಗ್ಗಳ ಮೇಲೆ ನೇತಾಡುತ್ತಿರುವ ಕೆಲವು ವೀಡಿಯೊಗಳು ಸಹ ಹೊರಬಂದಿವೆ.
Los hinchas de Colo Colo realizaban un ‘arengazo’, cuando colapsó el techo de una de las tribunas del estadio Monumental.#FútbolChileno 🇨🇱 pic.twitter.com/Y2JOqUSX94
— En Una Baldosa (@enunabaldosa) September 30, 2022
ಕೊಲೊ ಕೊಲೊ ಹೇಳಿಕೆಯ ಪ್ರಕಾರ, ʻಇಲ್ಲಿ ಭಾಗವಹಿಸಿದ್ದವರು ಕನಿಷ್ಠ ಮಾನದಂಡಗಳನ್ನು ಫಾಲೋ ಮಾಡಿಲ್ಲ. ಅಲ್ಲಿ ಒಂದು ಗುಂಪಿನ ಜನರು ಜಾಹೀರಾತುಗಾಗಿ ರಚನೆಯ ಮೇಲೆ ಹತ್ತಿದ್ದು, ಅದರ ಒಂದು ಭಾಗವನ್ನು ಕುಸಿಯುವಂತೆ ಮಾಡಿದ್ದಾರೆ. ಈ ವೇಳೆ ಭಾಗಿಯಾಗಿರುವ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಯಿತು. ಇಲ್ಲಿ ನಡೆದ ಘಟನೆಗಳಿಗೆ ನಾವು ವಿಷಾದಿಸುತ್ತೇವೆʼ ಎಂದು ತಿಳಿಸಿದೆ.
ಇನ್ನೂ, ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
BIGG NEWS : `ಚರ್ಮಗಂಟು’ ರೋಗದಿಂದ ಜಾನುವಾರು ಸತ್ತರೆ ಮಾಲೀಕರಿಗೆ ಪರಿಹಾರ : ರಾಜ್ಯ ಸರ್ಕಾರದಿಂದ ಆದೇಶ