ಬೆಂಗಳೂರು: ಕೆಎಸ್ಆರ್ ಟಿಸಿ ನೌಕರರಿಗೆ ವೇತನ ಪಾವತಿಯಲ್ಲಿ ಆಗುತ್ತಿದ್ದಂತ ಸಮಸ್ಯೆ ಸರಿ ಪಡಿಸಿ, ಇನ್ಮುಂದೆ ಪ್ರತಿ ತಿಂಗಳು 1ನೇ ತಾರೀಕಿನಂದೇ ವೇತನ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿ ಎಂ.ಡಿ ಅನ್ಬುಕುಮಾರ್ ಆದೇಶಿಸಿದ್ದರು. ಈ ಆದೇಶದಂತೆ ಅಕ್ಟೋಬರ್ 1ರ ಇಂದು ತಿಂಗಳ ಮೊದಲ ದಿನವೇ 36,000 ಸಾರಿಗೆ ನೌಕರರಿಗೆ ವೇತನ ಪಾವತಿ ಮಾಡಲಾಗಿದೆ. ಈ ಮೂಲಕ ಕೆ ಎಸ್ ಆರ್ ಟಿಸಿಯ ಸಿಬ್ಬಂದಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಲಾಗಿದೆ.
ಕಳೆದ ದಿನಾಂಕ 15-09-2022ರ ಆದೇಶದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದಂತ ವಿ ಅನ್ಬುಕುಮಾರ್ ( KSRTC MD V Anbhukumar ) ಅವರು ನಿಗಮದ ಎಲ್ಲಾ ಆದೇಶ ಹೊರಡಿಸಿದ್ದಾರೆ. ಆ ಆದೇಶದಲ್ಲಿ ಆಡಳಿತ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 1ನೇ ತಾರೀಕು, ತಾಂತ್ರಿಕ ಸಿಬ್ಬಂದಿಗಳಿಗೆ 4ನೇ ತಾರೀಕು, ಚಾಲಕ ಸಿಬ್ಬಂದಿಗಳಿಗೆ 6ನೇ ತಾರೀಕು ವೇತನ ಪಾತಿಸಗೆ ಎಂಜಿಆರ್ ಟಿಡಿ ಸ್ಥಾಯಿ ಆದೇಶದಲ್ಲಿ ನಿರ್ದೇಶನವಿರುತ್ತದೆ ಎಂದಿದ್ದರು.
ಇದಲ್ಲದೇ ನೌಕರರ ವೇತನವನ್ನು ಸಾಮಾನ್ಯವಾಗಿ 7ನೇ ತಾರೀಕಿನಂದು ಪಾವತಿ ಮಾಡಲು 1957 ಮತ್ತು 1962ರ ಕೈಗಾರಿಕ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ವೇತನ ಪಾವತಿ ಕುರಿತು ಅನುಸರಿಸುವ ಕ್ರಮಗಳ ಕುರಿತು ಲೆಕ್ಕಪತ್ರ ಕೈಪಿಡಿಯಲ್ಲಿ ನಿರ್ದೇಶನಗಳಿರುತ್ತವೆ ಎಂದು ತಿಳಿಸಿದ್ದರು.
ಪ್ರಸ್ತುತ ಕೆಎಸ್ಆರ್ ಟಿಸಿ ನಿಗಮದಲ್ಲಿ ಕೇಂದ್ರ ಕಚೇರಿ, ವಿಭಾಗೀಯ ಕಚೇರಿ, ತರಬೇತಿ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿ ತಿಂಗಳು 7ನೇ ತಾರೀಕಿನಂದು ವೇತನವನ್ನು ಪಾವತಿಸಲಾಗುತ್ತಿದೆ. ಆದ್ರೇ ಇನ್ಮುಂದೆ ವೇತನ ಪಾವತಿಯಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ, ನೌಕರರ ವೇತನವನ್ನು ಪ್ರತಿ ತಿಂಗಳ 1ನೇ ತಾರೀಕಿನಂದು ಪಾವತಿಸಲು ತೀರ್ಮಾನಿಸಲಾಗಿದೆ ಎಂದಿದ್ದರು.
ಅದೇನೆಂದ್ರೇ ವೇತನ ಪಾವತಿ ಸಂಬಂಧ ವಾಸ್ತವಿಕ ಹಾಜರಾತಿ ಪರಿಗಣನೆಗೆ ಪ್ರತಿ ತಿಂಗಳ 20ನೇ ತಾರೀಕು ಡೆಡ್ ಲೈನ್ ನೀಡಿದ್ದಾರೆ. ಊಹಾತ್ಮಕ ಹಾಜರಾತಿಗೆ 21ನೇ ತಾರೀಕಿನಿಂದ ತಿಂಗಳಾಂತ್ಯದವರೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ರಜೆ ಮಂಜೂರಾತಿ ಆದೇಶಗಳನ್ನು 23ನೇ ತಾರೀಕಿನ ಒಳಗೆ ಸಲ್ಲಿಸಬೇಕು. ಸಮಯ ಪಟ್ಟಿಯನ್ನು 25ನೇ ತಾರೀಕು, ಹಾಜರಾತಿ ಹಾಗೂ ಪೂರಕ ವಿವರಣಾ ಪಟ್ಟಿಗಳನ್ನು ಲೆಕ್ಕಪತ್ರ ಇಲಾಖೆ, ಶಾಖೆಗೆ ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಸಲ್ಲಿಸಿ, ಪ್ರತಿ ತಿಂಗಳ 1ನೇ ತಾರೀಕಿನಂದು ಕೆ ಎಸ್ ಆರ್ ಟಿ ಸಿಯ ಅಧಿಕಾರಿ, ತಾಂತ್ರಿಕ ವರ್ಗ, ಸಿಬ್ಬಂದಿ, ಚಾಲಕ, ನಿರ್ವಾಹಕರಿಗೆ ವೇತನ ಪಾವತಿಯಾಗುವಂತೆ ಖಡಕ್ ಆದೇಶಿಸಿದ್ದರು.
ಈ ಆದೇಶದನ್ವಯ ಕಳೆದ 65 ವರುಷಗಳ ಕೆ ಎಸ್ ಆರ್ ಟಿ ಸಿ ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಕೆ ಎಸ್ ಆರ್ ಟಿ ಸಿ ಎಂ.ಡಿ ವಿ.ಅನ್ಬುಕುಮಾರ್ ಆದೇಶದಂತೆ ಚಾಲಕ, ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಸೇರಿ, ನಿಗಮದ ಸಮಸ್ತ 36000 ಸಿಬ್ಬಂದಿಗಳಿಗೆ ತಿಂಗಳ ಒಂದನೇ ದಿನಾಂಕದಂದು ವೇತನ ಪಾವತಿ ಮಾಡಲಾಗಿದೆ. ಈ ಮೂಲಕ ನುಡಿದಂತೆ ನಡೆದು, ಸಾರಿಗೆ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.