ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಘಟಂಪುರದಲ್ಲಿ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಭಕ್ತರು ತುಂಬಿದ್ದ ಟ್ರ್ಯಾಕ್ಟರ್ ಟ್ರಾಲಿ ಹೊಂಡಕ್ಕೆ ಬಿದ್ದು ಸುಮಾರು 22 ಮಂದಿ ಸಾವನ್ನಪ್ಪಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಮೃತರೆಲ್ಲರೂ ಫತೇಪುರದ ದೇವಿ ದೇವಸ್ಥಾನದಿಂದ ದರ್ಶನ ಪಡೆದು ಮನೆಗೆ ಮರಳುತ್ತಿದ್ದರು. ಎಲ್ಲಾ ಜನರಿಗೆ ಕೊರ್ತಾ ಗ್ರಾಮಕ್ಕೆ ಸೇರಿದವರು ಎನ್ನಲಾಗ್ತಿದೆ.
PM Modi expresses condolences over tractor-trolley mishap in Kanpur & also announces an ex-gratia of Rs 2 lakh from PMNRF to the next of kin of the deceased & Rs 50,000 to the injured https://t.co/kF97Rufccz pic.twitter.com/pNWOmDeV9D
— ANI (@ANI) October 1, 2022
ಕಾನ್ಪುರದಲ್ಲಿ ಟ್ರಾಕ್ಟರ್-ಟ್ರಾಲಿ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂತಾಪ ಸೂಚಿಸಿದ್ದಾರೆ. PMNRFನಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ., ಗಾಯಾಳುಗಳಿಗೆ 50,000 ರೂ.ಗಳ ಪರಿಹಾರವನ್ನು ಪ್ರಧಾನಿ ಮೋದಿ ಘೋಷಿಸಿದರು. ಘಾಟಂಪುರ ಪ್ರದೇಶದ ಬಳಿ ಈ ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಹಲವಾರು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ.