ನವದೆಹಲಿ : ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಮಧ್ಯಪ್ರದೇಶದ ಇಂದೋರ್ ಸತತ 6ನೇ ಬಾರಿಗೆ ಭಾರತದ ಸ್ವಚ್ಛ ನಗರವಾಗಿ ಆಯ್ಕೆಯಾಗಿದೆ. ಇನ್ನು ಸೂರತ್ ಮತ್ತು ನವಿ ಮುಂಬೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನ ಗಳಿಸಿವೆ. ಇನ್ನು ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆ ಫಲಿತಾಂಶಗಳನ್ನ ಶನಿವಾರ ಪ್ರಕಟಿಸಲಾಯಿತು.
ಈ ಕುರಿತು “ಮಧ್ಯಪ್ರದೇಶದ ಇಂದೋರ್ ಸತತ 6ನೇ ಬಾರಿಗೆ ಸ್ವಚ್ಛ ಸರ್ವೇಕ್ಷಣ್ 2022 ಪ್ರಶಸ್ತಿಗಳಲ್ಲಿ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೇಳಿದೆ.
ಇನ್ನು ಗುಜರಾತ್ನ ಸೂರತ್ 2022ರ ಸ್ವಚ್ಛ ಸರ್ವೇಕ್ಷಣ್ 2022 ಪ್ರಶಸ್ತಿಗಳಲ್ಲಿ ಭಾರತದ 3ನೇ ಸ್ವಚ್ಛ ನಗರವಾಗಿ ಮತ್ತು ಮಹಾರಾಷ್ಟ್ರದ ನವಿ ಮುಂಬೈ ಭಾರತದ 3ನೇ ಸ್ವಚ್ಛ ನಗರವಾಗಿ ಸ್ಥಾನ ಪಡೆದಿದೆ.
ಇಂದೋರ್ ಮತ್ತು ಸೂರತ್ ಈ ವರ್ಷ ದೊಡ್ಡ ನಗರಗಳ ವಿಭಾಗದಲ್ಲಿ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡರೆ, ವಿಜಯವಾಡ ತನ್ನ ಮೂರನೇ ಸ್ಥಾನವನ್ನು ನವಿ ಮುಂಬೈ ವಿರುದ್ಧ ಕಳೆದುಕೊಂಡಿತು.
For the 6th time in a row, Madhya Pradesh's Indore has been ranked as the cleanest city in India in the Swachh Survekshan 2022 Awards: Ministry of Housing and Urban Affairs pic.twitter.com/oPyIGKF7KN
— ANI (@ANI) October 1, 2022
ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, 100 ಕ್ಕಿಂತ ಕಡಿಮೆ ನಗರ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ರಾಜ್ಯಗಳಲ್ಲಿ, ತ್ರಿಪುರಾವು ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಇತರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ದ್ರೌಪದಿ ಮುರ್ಮು ಶನಿವಾರ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ಪಂಚಗಣಿ ಮೊದಲ ಸ್ಥಾನದಲ್ಲಿದ್ದರೆ, ಛತ್ತೀಸ್ಗಢದ ಪಟಾನ್ (ಎನ್ಪಿ) ಮತ್ತು ಮಹಾರಾಷ್ಟ್ರದ ಕರ್ಹಾದ್ ನಂತರದ ಸ್ಥಾನಗಳಲ್ಲಿವೆ.
ಹರಿದ್ವಾರವು 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ವರ್ಗದಲ್ಲಿ ಅತ್ಯಂತ ಸ್ವಚ್ಛವಾದ ಗಂಗಾ ಪಟ್ಟಣವಾಗಿ ಆಯ್ಕೆಯಾಗಿದ್ದು, ವಾರಣಾಸಿ ಮತ್ತು ಹೃಷಿಕೇಶ ನಂತರದ ಸ್ಥಾನಗಳಲ್ಲಿವೆ.
ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಗಂಗಾ ಪಟ್ಟಣಗಳಲ್ಲಿ ಬಿಜ್ನೋರ್ ಮೊದಲ ಸ್ಥಾನದಲ್ಲಿದೆ. ನಂತರ ಕ್ರಮವಾಗಿ ಕನೌಜ್ ಮತ್ತು ಗರ್ಮುಖೇಶ್ವರವಿದೆ.
ಸಮೀಕ್ಷೆಯ ಪ್ರಕಾರ, ಮಹಾರಾಷ್ಟ್ರದ ದಿಯೋಲಾಲಿಯನ್ನು ದೇಶದ ಸ್ವಚ್ಛ ಕಂಟೋನ್ಮೆಂಟ್ ಬೋರ್ಡ್ ಎಂದು ಆಯ್ಕೆ ಮಾಡಲಾಗಿದೆ.
ಸ್ವಚ್ಛ ಭಾರತ ಮಿಷನ್ (ನಗರ) ನ ಪ್ರಗತಿಯನ್ನು ಅಧ್ಯಯನ ಮಾಡಲು ಮತ್ತು ವಿವಿಧ ಸ್ವಚ್ಛತೆ ಮತ್ತು ನೈರ್ಮಲ್ಯ ಮಾನದಂಡಗಳ ಆಧಾರದ ಮೇಲೆ ನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್ ಬಿ) ಶ್ರೇಯಾಂಕ ನೀಡಲು 7 ನೇ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ್ ಅನ್ನು ನಡೆಸಲಾಯಿತು.
ಸರ್ವೇಕ್ಷಣ್ 2016 ರಲ್ಲಿ 73 ನಗರಗಳ ಮೌಲ್ಯಮಾಪನದಿಂದ ಈ ವರ್ಷ 4,354 ನಗರಗಳನ್ನು ಒಳಗೊಂಡಿದೆ.