ಚಾಮರಾಜನಗರ: ರಾಜ್ಯದಲ್ಲಿ 2ನೇ ದಿನಕ್ಕೆ ಕಾಲಿಟ್ಟಿರುವ ಭಾರತ್ ಜೋಡೋ ಯಾತ್ರೆಯಲ್ಲಿ ‘ಪೇಸಿಎಂ’ ಟೀ ಶರ್ಟ್ ಧರಿಸಿದ್ದ ಯುವಕನೋರ್ವನ್ನು ಚಾಮರಾಜನಗರ ಪೊಲೀಸರು ಬಂಧಿಸಿರೋದರ ಜೊತೆಗೆ ಕಾರ್ಯಕರ್ತರು ಜನರಿಗಿಂತ ಪೊಲೀಸರೆ ಥಳಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
BIGG NEWS : ರೈತರೇ ಗಮನಿಸಿ : ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ವಿಜಯಪುರ ಮೂಲದ ಅಕ್ಷಯ್ ಕುಮಾರ್ ಬಂಧಿತ ಯುವಕನಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಇರುವ ಟೀ ಶರ್ಟ್ ಧರಿಸಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದ್ದಾನೆಂಬ ಆರೋಪದ ಮೇಲೆ ಈತನ ವಿರುದ್ಧ ಚಾಮರಾಜನಗರ ಸೆನ್ ಠಾಣೆಯಲ್ಲಿ ಕಿರಣ್ ಎಂಬವರು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿತ್ತು.
BIGG NEWS : ರೈತರೇ ಗಮನಿಸಿ : ಕೃಷಿ ಸಿಂಚಾಯಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಇಂದು ಕೂಡ ಭಾರತ್ ಜೊಡೋ ಯಾತ್ರೆಯಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್, ಪೇಸಿಎಂ ಟೀ ಶರ್ಟ್ ಧರಿಸಿದ್ದನು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ ಶಿವಕುಮಾರ್ ನೇತೃತ್ವದ ಪೊಲೀಸರ ತಂಡವ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪ ಯವಕನನ್ನು ಬಂಧಿಸಿದ್ದಾರೆ . ವಿಪರ್ಯಾಸವೆಂದರೆ ಎಸ್ಪಿ ಶಿವಕುಮಾರ್ ಹಾಗೂ ಮತ್ತೊಬ್ಬ ಪೇದೆಯೆ ಮುಷ್ಟಿ ಕಟ್ಟಿ ಬೆನ್ನಿಗೆ ಗುದ್ದುತ್ತಿರೋದು ಮಾನವ ಹಕ್ಕು ಚ್ಯುತಿ ತಂದಂತಲ್ಲವೆ.?ಎಂದು ಕೆಲವರು ಆರೋಪಿಸಿದ್ದಾರೆ.