ದೆಹಲಿ: ಕಳೆದ ತಿಂಗಳು ಸೋದರ ಸಂಬಂಧಿ ಸೇರಿದಂತೆ ಮೂವರು ಸ್ನೇಹಿತರಿಂದ ಲೈಂಗಿಕ ದೌರ್ಜನ್ಯ ಮತ್ತು ಕ್ರೌರ್ಯಕ್ಕೆ ಒಳಗಾದ 10 ವರ್ಷದ ಬಾಲಕ ಇಂದು ಬೆಳಗ್ಗೆ ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ್ನ ಆಸ್ಪತ್ರೆ (LNJP)ಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಮಕ್ಕಳು 10 ರಿಂದ 12 ವರ್ಷ ವಯಸ್ಸಿನ ಮೂವರು ಈಶಾನ್ಯ ದೆಹಲಿಯ ನ್ಯೂ ಸೀಲಂಪುರ್ ಪ್ರದೇಶದ ನಿವಾಸಿಗಳು ಈ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿ ದೌರ್ಜನ್ಯ ಎಸಗಿದ್ದರು. ಅಷ್ಟೇ ಅಲ್ಲದೇ, ಬಾಲಕನ ಖಾಸಗಿ ಅಂಗಕ್ಕೆ ರಾಡ್ ಹಾಕಿ ಹಿಂಸಿಸಿದ್ದರು. ಈ ಘಟನೆ ಸೆಪ್ಟೆಂಬರ್ 18 ರಂದು ನಡೆದಿತ್ತು. ಘಟನೆ ನಡೆದ ನಾಲ್ಕು ದಿನಗಗಳ ನಂತ್ರ ಬಾಲಕನ ಸ್ಥಿತಿ ಗಂಭೀರವಾಗಿದ್ದು, ವಿಷಯ ಬೆಳಕಿಗೆ ಬಂದಿದೆ. ಈ ವೇಳೆ ಪೋಷಕರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಇಂದು ಆತ ಚಿಕಿತ್ಸೆ ಫಲಗಾರಿಯಾಗದೇ ಸಾವನ್ನಪ್ಪಿದ್ದಾನೆ.
ವೈದ್ಯರು ವರದಿಯ ಪ್ರಕಾರ ಬಾಲಕನ ಸ್ಥಿತಿ ಎಷ್ಟು ಭೀಕರವಾಗಿತ್ತು ಎಂದರೆ ಈ ಘಟನೆ ಡಿಸೆಂಬರ್ 16, 2012 ರ ಸಾಮೂಹಿಕ ಅತ್ಯಾಚಾರವನ್ನು ನೆನಪಿಸಿದೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ಬಾಲಕನ ತಾಯಿ ದೆಹಲಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದರು. ಆಕೆ ನೀಡಿರುವ ದೂರಿನಲ್ಲಿ, ʻನನ್ನ ಮಗನನ್ನು ಆತನ ಮೂವರು ಸ್ನೇಹಿತರು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಸ್ವಾಭಾವಿಕ ಸಂಭೋಗ ನಡೆಸಿದ್ದಾರೆ. ಇದನ್ನು ವಿರೋಧಿಸಿದಾಗ ಅವನ ಮೇಲೆ ದುಷ್ಕರ್ಮಿಗಳು ದೊಣ್ಣೆ ಮತ್ತು ಇಟ್ಟಿಗೆಗಳಿಂದ ಥಳಿಸಿ, ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಕೂಡ ಈ ಸಂಬಂಧ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
BIGG BREAKING NEWS : ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ| Mallikarjun Kharge